ರಾಮಚಂದ್ರ ತೊಕ್ಕೊಟ್ಟು

ತೊಕ್ಕೊಟ್ಟು, ಜ.28: ಕರ್ನಾಟಕ ಸರಕಾರದ ಲೆಕ್ಕಪತ್ರ ಪರಿಶೀಲನ ವಿಭಾಗದ ನಿವೃತ್ತ ಉನ್ನತಾಧಿಕಾರಿ, ತೊಕ್ಕೊಟ್ಟು ಆವರ್ ಬ್ರಿಜ್ ಸಮೀಪದ ನಿವಾಸಿ, ಹಿರಿಯ ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ರಾಮಚಂದ್ರ ತೊಕ್ಕೊಟ್ಟು(74) ಗುರುವಾರ ನಿಧನರಾಗಿದ್ದಾರೆ.
ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದರೂ ಕೊನೆ ತನಕವೂ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕುಂಬಳೆ ನಾರಾಯಣ ಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸುಮಾರು ನಾಲ್ಕುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ದೇವಾಂಗ ಸಮಾಜದ ಸ್ಥಾಪಕರಲ್ಲಿ ಒಬ್ಬರಾದ ಅವರು ಸದ್ಯ ಸಂಘಟನೆಯ ಗೌರವಾಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದರು.
ಮಂಗಳೂರು ಶ್ರೀ ಭಗವತಿ ಸೇವಾ ಟ್ರಸ್ಟಿನ ಆಡಳಿತ ಟ್ರಸ್ಟಿ, ಚೀರುಂಬಾ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಸ್ಥಾಪನೆಯ ರೂವಾರಿ, 5 ನಗರ ಕ್ಷೇತ್ರ ಸಂರಕ್ಷಣ ಸಮಿತಿ ಉಪಾಧ್ಯಕ್ಷ, ತೊಕ್ಕೊಟ್ಟು ವೀರಮಾರುತಿ ವ್ಯಾಯಾಮ ಶಾಲೆ, ತೊಕ್ಕೊಟ್ಟು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಗಳ ಮಾಜಿ ಅಧ್ಯಕ್ಷ, ತೊಕ್ಕೊಟು ವಿಠೋಬಾ ಕ್ಷೇತ್ರ ಸಹಿತ ನೂರಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಮೂವರು ಪುತ್ರಿಯರು ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.







