ನೂತನ ಸಿಇಎ ಆಗಿ ಅನಂತ ನಾಗೇಶ್ವರನ್ ಅಧಿಕಾರ ಸ್ವೀಕಾರ

ಹೊಸದಿಲ್ಲಿ, ಜ. 27: 2021 ಡಿಸೆಂಬರ್ 7ರಂದು ಕೃಷ್ಣಮೂರ್ತಿ ಸುಬ್ರಹ್ಮಣೀಯನ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರನನ್ನಾಗಿ ಕೇಂದ್ರ ಸರಕಾರ ಡಾ. ವಿ. ಅನಂತ ನಾಗೇಶ್ವರನ್ ಅವರನ್ನು ಶುಕ್ರವಾರ ನೇಮಕ ಮಾಡಿದೆ.
ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ಕೆಲವು ದಿನಗಳ ಮುನ್ನ ಡಾ. ನಾಗೇಶ್ವರನ್ ಅವರು ಮುಖ್ಯ ಆರ್ಥಿಕ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಡಾ. ನಾಗೇಶ್ವರನ್ ಅವರು ಭಾರತದ ಹಲವು ಬ್ಯುಸಿನಸ್ ಸ್ಕೂಲ್ ಹಾಗೂ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ಗಳಲ್ಲಿ ಬೋಧಿಸಿದ್ದಾರೆ. ಅಲ್ಲದೆ, ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು ಶಿಕ್ಷಕರಾಗಿ, ಸಮಾಲೋಚನಕರಾಗಿ ಹಾಗೂ ಲೇಖಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Next Story





