ಮೂಡುಬಿದಿರೆ: ಕರಿಂಜೆ ಗ್ರಾಮದ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ, ಜ.29: ಪುರಸಭೆ ವ್ಯಾಪ್ತಿಯ ಕರಿಂಜೆಗುತ್ತು ಸಮೀಪದ ವ್ಯಕ್ತಿಯೊಬ್ಬರ ಮೃತದೇಹ ಶನಿವಾರ ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
ದೈವ ಮುಕಾಲ್ದಿ, ಕರಿಂಜೆ ಗ್ರಾಮದ ಪೂವಪ್ಪ ಶೆಟ್ಟಿ ಎಂಬವರ ಪುತ್ರ ಜಯಕರ ಶೆಟ್ಟಿ(38) ಮೃತಪಟ್ಟವರಾಗಿದ್ದಾರೆ.
ಅವರು ತಂದೆಯ ಜೊತೆ ದೈವದ ಚಾಕರಿಗೆ ಹೋಗುತ್ತಿದ್ದರು. ಜಯಕರ್ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story