'ಉತ್ತರಪ್ರದೇಶದಲ್ಲಿ ಬಿಜೆಪಿಯ ಪ್ರಚಾರ ರಾಮಮಂದಿರ, ಮಸೀದಿ, ಜಿನ್ನಾ, ಪಾಕಿಸ್ತಾನವನ್ನು ಆಧರಿಸಿದೆ': ಜಯಂತ್ ಚೌಧರಿ ಆರೋಪ

ಹೊಸದಿಲ್ಲಿ: ಉತ್ತರಪ್ರದೇಶ ಸರಕಾರದಿಂದ ಭಾರೀ ಅಧಿಕಾರ ದುರ್ಬಳಕೆಯಾಗುತ್ತಿದೆ. ಶಿಕ್ಷಕರನ್ನು ರ‍್ಯಾಲಿಗಳಿಗೆ ಬರುವಂತೆ ಮಾಡಿ ಬಸ್‌ಗಳಲ್ಲಿ ತುಂಬಿಸಿ ಕಳುಹಿಸಲಾಗುತ್ತಿದೆ. ಈ ಬಾರಿ ಅಂಚೆ ಮತಪತ್ರದ ದುರ್ಬಳಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’’ ಎಂದು ಆರ್‌ಎಲ್‌ಡಿಯ ಜಯಂತ್ ಚೌಧರಿ ಇಂದು NDTVಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
" ತಮ್ಮ ಹಿರಿಯರ ಮೇಲ್ವಿಚಾರಣೆಯಲ್ಲಿ ಮತ ಹಾಕುವಂತೆ ಮಾಡಲಾಗುತ್ತಿದೆ ಎಂದು ಯೋಧರು ನನಗೆ ಹೇಳಿದ್ದಾರೆ. ಇದು ಮತ್ತೆ ಸಂಭವಿಸಲಿದೆ" ಎಂದು 43 ವರ್ಷದ ರಾಷ್ಟ್ರೀಯ ಲೋಕದಳ ಅಥವಾ ಆರ್‌ಎಲ್‌ಡಿ ಮುಖ್ಯಸ್ಥರು ಹೇಳಿದ್ದಾರೆ.
"ಬಿಜೆಪಿ ಬದಲಾಗುವುದಿಲ್ಲ. ಅವರ ಸಂಪೂರ್ಣ ಪ್ರಚಾರವು ಮಂದಿರ-ಮಸೀದಿ ರಾಜಕೀಯ, ರಾಮಮಂದಿರ ನಿರ್ಮಾಣ, ಜಿನ್ನಾ ಇತ್ಯಾದಿಗಳನ್ನು ಆಧರಿಸಿದೆ. 20ರಷ್ಟು ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಈ ಶೇಕಡಾ 20 ಮಂದಿ ಯಾರು? ಬಿಜೆಪಿಯವರ ವಾಕ್ಚಾತುರ್ಯದ ಪ್ರಕಾರ, ಈ ಶೇಕಡಾ 20 ರಷ್ಟು ಜನರು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. ಬಿಜೆಪಿಗೆ ಏನಾದರೂ ಕೆಟ್ಟದು ಸಂಭವಿಸಿದಾಗ ಪಟಾಕಿ ಸಿಡಿಸುತ್ತಾರೆ" ಎಂದು ಆರ್‌ಎಲ್‌ಡಿ ನಾಯಕ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಬಿಜೆಪಿಯು ಪಶ್ಚಿಮ ಉತ್ತರಪ್ರದೇಶದಲ್ಲಿ ನಿರ್ಣಾಯಕ ಜಾಟ್ ಮತಗಳನ್ನು ಕ್ರೋಢೀಕರಿಸಲು ಹೊಸ ತಂತ್ರವನ್ನು ಮಾಡುತ್ತಿದೆ. ಜಾಟ್ ಸಮುದಾಯ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿತ್ತು. ಚೌಧರಿಯವರ ಆರ್ ಎಲ್ ಡಿ ಈ ಬಾರಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಕೈಜೋಡಿಸಿದೆ.
ಈಗ ಹಿಂತೆಗೆದುಕೊಳ್ಳಲಾದ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಸುದೀರ್ಘ ಪ್ರತಿಭಟನೆಯ ನಂತರ ಜಾಟ್‌ಗಳು ಬಿಜೆಪಿ ವಿರುದ್ಧ ತಿರುಗಿಬಿದ್ದರು. ಈಗ ಎಂದಿಗಿಂತಲೂ ಹೆಚ್ಚಾಗಿ ರೈತರು ಆರ್‌ಎಲ್‌ಡಿ ನಾಯಕನ ಹಿಂದೆ ಒಟ್ಟುಗೂಡುತ್ತಿದ್ದಾರೆ.
ರೈತ ಕಾನೂನು ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಮ್ಮ ನಾಯಕ ರಾಕೇಶ್ ಟಿಕಾಯತ್ ಭಾವುಕರಾಗಿ ಅಳಲು ಪ್ರಾರಂಭಿಸಿದಾಗ ರೈತರ ಮನಸ್ಥಿತಿಯಲ್ಲಿ ಬದಲಾವಣೆ ಕಂಡುಬಂದಿದೆ. ಅದು ಜನರನ್ನು ಪ್ರೇರೇಪಿಸಿತು, ಅದು ನಮ್ಮೆಲ್ಲರನ್ನು ಪ್ರೇರೇಪಿಸಿತು . ನನ್ನ ತಂದೆ, ನಾನು, ದೊಡ್ಡ ಸಮುದಾಯವನ್ನು ಪ್ರೇರೇಪಿಸಿತು. ಅದು ನಿರ್ಣಾಯಕ ಕ್ಷಣವಾಗಿದೆ. ನಾವು ನಮ್ಮ ನಡುವೆ ಜಗಳವಾಡಬಹುದು, ಆದರೆ ಅಂತಹ ಸಮಯದಲ್ಲಿ ನಾವೆಲ್ಲರೂ ಒಗ್ಗೂಡುತ್ತೇವೆ" ಎಂದು ಚೌಧರಿ ಹೇಳಿದರು.







