ಮಂಗಳೂರು: ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ 'ಗೆಲುವಿನ ಗುಟ್ಟು' ಕಾರ್ಯಕ್ರಮ

ಮಂಗಳೂರು: ಜಮೀಯ್ಯತುಲ್ ಪಲಾಹ್ ಮಂಗಳೂರು ತಾಲೂಕು, ಮೂಡಬಿದಿರೆ ಘಟಕ ಮತ್ತು ಜೇಸೀ ಮೂಡಬಿದಿರೆ ತ್ರಿಭುವನ್ ಹಾಗೂ ಸಮಚಾ ಉಳ್ಳಾಲ ಇದರ ವತಿಯಿಂದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಎಲ್ಲ ವಿದ್ಯಾಸಂಸ್ಥೆಗಳ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ 'ಗೆಲುವಿನ ಗುಟ್ಟು' ಕಾರ್ಯಕ್ರಮವನ್ನು ಟಿಪ್ಪು ಸುಲ್ತಾನ್ ಪದವಿ ಪೂರ್ವ ಕಾಲೇಜು ಒಂಬತ್ತು ಕೆರೆಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಹಾಗೂ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಜೇಸೀ ತರಬೇತುದಾರ ವಿನೋದ್ ಅವರು ಎಸ್ಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಜಮೀಯತುಲ್ ಫಲಾಹ್ ಮೂಡಬಿದ್ರೆ ಇದರ ಅಧ್ಯಕ್ಷ ಅಬ್ದುಲ್ ಗಫಾರ್ ಖಾನ್, ಪ್ರಧಾನ ಕಾರ್ಯದರ್ಶಿಗಳಾದ ಸಲೀಮ್ ಹಂಡೇಲ್, ಜಮೀಯತುಲ್ ಫಲಾಹ್ ಮಂಗಳೂರು ಕೋಶಾಧಿಕಾರಿಗಳಾದ ಇಬ್ರಾಹಿಂ ಕೋಡಿಜಾಲ್ ಹಾಗೂ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಉಪಸ್ಥಿತರಿದ್ದರು.
ಸಮಾಚಾರ ಅಧ್ಯಕ್ಷರಾದ ಎಂ.ಎಚ್. ಮಲಾರ್ ಗಣ್ಯರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು. ಟಿಪ್ಪು ಸುಲ್ತಾನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುರಹ್ಮಾನ್ ವಂದಿಸಿದರು.