Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಕನ್ನಡ ಮನಸು’ಗಳಿಂದ ಸರಕಾರಿ ಶಾಲೆಗಳ...

‘ಕನ್ನಡ ಮನಸು’ಗಳಿಂದ ಸರಕಾರಿ ಶಾಲೆಗಳ ಉಳಿವಿಗೆ ಅಭಿಯಾನ

ಕುಂದಾಪುರದ ಕರ್ಕುಂಜೆ, ಕೂಡಿಗೆ ಸರಕಾರಿ ಶಾಲೆಗಳಿಗೆ ಕಾಯಕಲ್ಪ

ವಾರ್ತಾಭಾರತಿವಾರ್ತಾಭಾರತಿ29 Jan 2022 7:55 PM IST
share
‘ಕನ್ನಡ ಮನಸು’ಗಳಿಂದ ಸರಕಾರಿ ಶಾಲೆಗಳ ಉಳಿವಿಗೆ ಅಭಿಯಾನ

ಕುಂದಾಪುರ, ಜ.29: ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಶಾಲೆಗಳು ಒಂದೊಂದಾಗಿ ಕಣ್ಣುಮುಚ್ಚುತ್ತಿರುವ ಈ ಕಾಲಘಟ್ಟದಲ್ಲಿ ‘ಕನ್ನಡ ಮನಸುಗಳು’ ಎಂಬ ತಂಡವೊಂದು ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಐದು ವರ್ಷಗಳ ಹಿಂದೆ ಹುಟ್ಟಿಕೊಂಡ ಸಮಾನ ಮನಸ್ಕ ’ಕನ್ನಡ ಮನಸುಗಳು ಪ್ರತಿಷ್ಟಾನ’ ಎಂಬ ಯುವಜನರ ಪಡೆ ಮೂರುವರೆ ವರ್ಷಗಳಿಂದ ‘ಸರಕಾರಿ ಶಾಲೆ ಉಳಿಸಿ ಅಭಿಯಾನ’ವನ್ನು ಆರಂಭಿಸಿದೆ. ಈ ತಂಡದಲ್ಲಿ ಸುಮಾರು 150 ಮಂದಿ ಯುವಕ ಯುವತಿಯರು ಕೆಲಸ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ತಾವು ಹಿಂದೆ ಕಲಿತ, ತಮ್ಮ ಬದುಕಿಗೆ ಭದ್ರ ಬುನಾದಿ ಒದಗಿಸಿಕೊಟ್ಟ ಶಾಲೆಗಳು ಈಗ ಸೊರಗುತ್ತಿರುವುದನ್ನು, ದುರಸ್ಥಿ, ದುರವಸ್ಥೆಗೆ ತಲುಪಿರುವುದನ್ನು ಕಂಡಿರುವ ಈ ಯುವಜನರು, ಇಂತಹ ಶಾಲೆಗಳ ಏಳಿಗೆಗೆ ಕೆಲಸ ಮಾುವ ಗಟ್ಟಿ ಮನಸ್ಸು ಮಾಡಿದ್ದಾರೆ.

11 ಶಾಲೆಗಳಲ್ಲಿ ಅಭಿಯಾನ

ರಾಜ್ಯದಲ್ಲಿ ಈ ತಂಡ ಈವರೆಗೆ 11 ಸರಕಾರಿ ಶಾಲೆಗಳಿಗೆ ಬಣ್ಣ ಬಳಿದು, ಆಯಾ ಶಾಲೆಗಳಿಗೆ ಅಗತ್ಯವಿರುವ ನೀರು, ಟಾಯ್ಲೆಟ್ ಸೇರಿ ಇತರೆ ಎಲ್ಲ ಮೂಲ ಸೌಕರ್ಯಗಳನ್ನು ನೀಡಿ ಹಳೆ ಶಾಲಾ ಕಟ್ಟಡಕ್ಕೆ ಹೊಸ ಮೆರಗು ನೀಡಿದೆ. ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರಕಾರಿ ಶಾಲೆಗಳನ್ನು ಈ ತಂಡ ಗುರುತಿಸಿ ದಾನಿಗಳ ಸಹಕಾರದೊಂದಿಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಸುಣ್ಣ ಬಣ್ಣ ಮತ್ತು ಅಗತ್ಯವಿರುವ ವಸ್ತುಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದೆ.

ಈಗಾಗಾಲೇ ಕಾಸರಗೋಡು, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಉಡುಪಿ, ರಾಮ ನಗರ, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಯ ಶಾಲೆಗಳಲ್ಲಿ ಈ ಅಭಿಯಾನ ನಡೆಸಲಾಗಿದೆ.ಇದರಲ್ಲಿ ಸರಕಾರಿ ಉದ್ಯೋಗಿಗಳಿಂದ ಹಿಡಿದು ಐಟಿಬಿಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿದ್ದಾರೆ. ನೀತು ಸೇರಿದಂತೆ ನಟ ನಟಿಯರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕೋವಿಡ್ ಲಾಕ್‌ಡೌನ್ ಹೊರತುಪಡಿಸಿ ಕಳೆದ ಮೂರು ವರ್ಷದಿಂದ ಇವರಿಗೆ ವಾರಾಂತ್ಯ ರಜೆ ಕಳೆಯಲು ಈ ಅಭಿಯಾನ ನೆಚ್ಚಿಕೊಂಡಿದ್ದಾರೆ. ತಿಂಗಳಲ್ಲಿ ಮೂರು ವೀಕೆಂಡ್ ಈ ಅಭಿಯಾನಕ್ಕೆ ಸೀಮಿತಗೊಳಿಸಿದ್ದಾರೆ.

ಕುಂದಾಪುರದ 2 ಶಾಲೆಗಳು

ತಂಡದ ಸದಸ್ಯ ಗಣೇಶ್ ಕೊಡ್ಲಾಡಿ ಅವರ ಕೋರಿಕೆಯಂತೆ ಅಭಿಯಾನವನ್ನು ಜ.29 ಹಾಗೂ 30ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರ ಶಿಕ್ಷಣ ವಲಯದ ಕರ್ಕುಂಜೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೂಡಿಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸುತ್ತಿದೆ. ಬೆಂಗಳೂರಿನಿಂದ ಆಗಮಿಸಿದ 50ಕ್ಕೂ ಹೆಚ್ಚು ಮಂದಿಯ ತಂಡ ಕರ್ಕುಂಜೆ ಶಾಲೆಯಲ್ಲಿ ಶನಿವಾರ ಅಭಿಯಾನ ಆರಂಭಿಸಿದೆ. ಜ.30ರಂದು ಕೂಡಿಗೆ ಶಾಲೆಯಲ್ಲಿ ನಡೆಸಲಿದೆ. ಶಾಲೆಗೆ ಆಧುನಿಕ ಕಲಿಕಾ ಪರಿಕರಗಳನ್ನು, ವಾಟರ್ ಫಿಲ್ಟರ್, ಫ್ಯಾನ್ ಸಹಿತ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಮಕ್ಕಳಿಗೆ ಪುಸ್ತಕ, ಪೆನ್ನು, ಮಾಸ್ಕ್ ಹೀಗೆ ಅಗತ್ಯವಿರುವ ವಸ್ತುಗಳನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿನ ದಾನಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕರ್ಕುಂಜೆ ಶಾಲೆ ಮುಖ್ಯ ದ್ವಾರದ ಕಾಂಪೌಂಡ್ ಗೋಡೆಗೆ ವರ್ಲಿ ಆರ್ಟ್, ಒಳಭಾಗದಲ್ಲಿ ಶಾಲೆ ಗೋಡೆಗಳಿಗೆ ಸುಣ್ಣಬಣ್ಣ, ಮುಖ್ಯ ರಸ್ತೆಗೆ ಕಾಣುವ ಹಾಗಿರುವ ಕೊಠಡಿಯ ಗೋಡೆಯಲ್ಲಿ ಪೇಂಟಿಂಗ್ ಮೂಲಕ ಯಕ್ಷಗಾನದ ಕಲಾಕೃತಿ, ಪಿಲ್ಲರ್ಗಳಿಗೆ ಬಣ್ಣ, ಧ್ವಜಸ್ತಂಭಕ್ಕೆ ಬಣ್ಣ ಬಳಿಯಲಾಗಿದೆ. ಎಸ್‌ಡಿ ಎಂಸಿ ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಅಭಿಯಾನಕ್ಕೆ ಸಹಕರಿಸಿದರು.

ಇದನ್ನೂ ಓದಿ: ಕವಿ ಡಾ.ಸಿದ್ದಲಿಂಗಯ್ಯ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿದ ಸರಕಾರ

"ಯಾವುದೇ ಸ್ವಾರ್ಥವಿಲ್ಲದೆ ಪ್ರೀತಿಯಿಂದ ಮಾಡುವ ಈ ಕೆಲಸ ಮಾದರಿ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸ್ನೇಹಿತರು ಕರೆಯುತ್ತಾರೆ. ಬಿಡುವಿದ್ದಾಗ ತೆರಳಿ ನಾನು ಕೂಡ ಭಾಗವಹಿಸುವೆ. ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳು ಸರಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಅಡಳಿತ ಮಂಡಳಿ ಮಾಡುತ್ತವೆ. ಸರಕಾರಿ ಶಾಲೆಗಳು ಅಭಿವೃದ್ಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗುತ್ತಿವೆ. ಯಾವುದೇ ಕಾರಣಕ್ಕೂ ಖಾಸಗಿ ಶಾಲೆ ಸರಕಾರಿ ಶಾಲೆ ಎಂಬ ತಾರತಮ್ಯ ಆಗಬಾರದು."

-ನೀತು, ನಟಿ

"ಈ ತಂಡದಲ್ಲಿರುವ ಬಹುತೇಕರು ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿತು, ಬಳಿಕ ವಿವಿಧ ಕ್ಷೇತ್ರಗಳಲ್ಲಿ ಪದವಿ, ಉನ್ನತ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರು. ನಾವು ಕಲಿತ ಗ್ರಾಮೀಣ ಭಾಗದ ಶಾಲೆಗಳ ಬಗ್ಗೆ ಅದೇ ಕಾಳಜಿ, ಅಭಿಮಾನ ಮತ್ತು ಪ್ರೀತಿಯನ್ನು ಈಗಲೂ ಇಟ್ಟುಕೊಂಡಿದ್ದೇವೆ. ಇಂತಹ ಶಾಲೆಗಳಿಗೆ ತಮ್ಮ ಕೈಲಾದಷ್ಟು ಒಳಿತು ಮಾಡಬೇಕು ಎಂಬ ಆಸೆ ಯೊಂದಿಗೆ ಅಭಿಯಾನ ಆರಂಭಿಸಿದ್ದೇವೆ."

-ಪವನ್, ತಂಡದ ಮುಖ್ಯಸ್ಥ

"ಶ್ರಮದಾನ ಜೊತೆಗೆ ಶಾಲೆಗಳಿಗೆ ನೀಡಲಿರುವ ಕೊಡುಗೆಗಳು ಸರಕಾರಿ ಶಾಲೆಯ ಮಕ್ಕಳಲ್ಲಿ ಕಲಿಕೆಯ ಕುರಿತು ಇನ್ನಷ್ಟು ಆಸಕ್ತಿ ಹುಟ್ಟಿಸಲಿದೆ. ಉತ್ಸಾಹ ಮೂಡಿಸಲಿದೆ. ಜೊತೆಗೆ ರಾಜ್ಯದ ಯಾವುದೋ ಮೂಲೆಗಳಿಂದ ಬಂದು ನಮ್ಮೂರಿನ ಶಾಲೆಗಳ ಕುರಿತು ಕಾಳಜಿ ತೋರಿಸಿದ ಕನ್ನಡ ಮನಸುಗಳು ತಂಡವನ್ನು ಈ ಊರು, ಶಾಲೆಯವರು ಬಹುಕಾಲ ನೆನೆಯಲಿದ್ದಾರೆ. ಈ ತಂಡದ್ದು ನಿಜಕ್ಕೂ ಮಾದರಿ ಕಾರ್ಯ."

-ಮೋತಿಲಾಲ್ ಲಮಾಣಿ, ಮುಖ್ಯ ಶಿಕ್ಷಕರು, ಕರ್ಕುಂಜೆ ಶಾಲೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X