Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಭಾರತದಲ್ಲಿ ನಡೆಯಲಿರುವ ಮೂರನೇ ಅಂಧರ...

ಭಾರತದಲ್ಲಿ ನಡೆಯಲಿರುವ ಮೂರನೇ ಅಂಧರ ಟಿ-20 ಕ್ರಿಕೆಟ್ ವಿಶ್ವಕಪ್

ವಾರ್ತಾಭಾರತಿವಾರ್ತಾಭಾರತಿ29 Jan 2022 8:16 PM IST
share
ಭಾರತದಲ್ಲಿ ನಡೆಯಲಿರುವ ಮೂರನೇ ಅಂಧರ ಟಿ-20 ಕ್ರಿಕೆಟ್ ವಿಶ್ವಕಪ್

ಹೊಸದಿಲ್ಲಿ: ಸಮರ್ಥನಂ ಅಂಗವಿಕಲರ ಸಂಸ್ಥೆಯ ಕ್ರೀಡಾ ವಿಭಾಗ ಭಾರತದಲ್ಲಿನ ಅಂಧರ ಕ್ರಿಕೆಟ್ ಅಸೋಸಿಯೇಷನ್ (ಕ್ಯಾಬಿ) ಭಾರತದಲ್ಲಿ ಮೂರನೇ ಅಂಧರ ಟಿ20 ವಿಶ್ವಕಪ್ ಆಯೋಜಿಸಲಿದೆ ಎಂದು ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ಖಾತ್ರಿಪಡಿಸಿದೆ.

ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ನ 23ನೇ ವಾರ್ಷಿಕ ಸಾಮಾನ್ಯ ಸಭೆಯು ಜನವರಿ 29, 2022 ರಂದು ವರ್ಚುವಲ್ ಆಗಿ ನಡೆಯಿತು. 5 ಗಂಟೆ ನಡೆದ ಸಭೆಯಲ್ಲಿ 10 ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗಿಯಾದವು. ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಕ್ರಿಕೆಟ್ ಅಸೋಸಿಯೇಷ್ ಫಾರ್ ದಿ ಬ್ಲೈಂಡ್ (ಕ್ಯಾಬಿ) ಸಭೆ ಆಯೋಜಿಸಿತ್ತು ಹಾಗೂ ಡಬ್ಲ್ಯೂಬಿಸಿಸಿಯ ಜನರಲ್ ಸೆಕ್ರೆಟರಿ ರೇಮಂಡ್ ಮೋಕ್ಸ್ಲಿ ಸಭೆ ನಡೆಸಿಕೊಟ್ಟರು. 

ವಿಶ್ವ ಅಂಧರ ಕ್ರಿಕೆಟ್ ಲಿಮಿಟೆಡ್ ನ ಅಧ್ಯಕ್ಷರಾದ ಸೈಯದ್ ಸುಲ್ತಾನ್ ಶಾ ಅವರು ಸದಸ್ಯ ರಾಷ್ಟ್ರಗಳ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಅಂಧರ ಕ್ರಿಕೆಟ್ ಉತ್ತೇಜಿಸಲಿಕ್ಕೆ ಮಾಡಿರುವ ಕೆಲಸವನ್ನು ಶ್ಲಾಘಿಸಿದರು. ಕ್ರಿಕೆಟ್ ಅಸೋಸಿಯೇಷ್ ಫಾರ್ ದಿ ಬ್ಲೈಂಡ್(ಕ್ಯಾಬಿ) ಅಧ್ಯಕ್ಷರಾದ ಡಾ. ಮಹಾಂತೇಶ್ ಜಿ ಕಿವಡಸಣ್ಣವರ್ 2021-22 ರಲ್ಲಿ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಪಂದ್ಯಗಳ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಇತರ ಸದಸ್ಯ ರಾಷ್ಟ್ರಗಳೂ ತಮ್ಮ ವಾರ್ಷಿಕ ವರದಿಯನ್ನು ಅತಿಥಿಗಳೆದುರಲ್ಲಿ ಮಂಡಿಸಿದರು.
 
ನವೆಂಬರ್ 2022ರಲ್ಲಿ ಭಾರತದ ಬೇರೆಬೇರೆ ನಗರಗಳಲ್ಲಿ ಮೂರನೇ ಅಂಧರ ಟಿ20 ವಿಶ್ವಕಪ್ ನಡೆಸುವುದಾಗಿ ಕ್ರಿಕೆಟ್ ಅಸೋಸಿಯೇಷ್ ಫಾರ್ ದಿ ಬ್ಲೈಂಡ್ (ಕ್ಯಾಬಿ) ಸಮಿತಿಗೆ ಮನವರಿಕೆ ಮಾಡಿಕೊಟ್ಟಿತು. ಎರಡನೆ ಟಿ-20 ವಿಶ್ವಕಪ್ ನಲ್ಲಿ ನಡೆದಂತೆ ಹತ್ತು ಸದಸ್ಯ ರಾಷ್ಟ್ರಗಳು ಭಾಗಿಯಾಗಲು ಕ್ರಿಕೆಟ್ ಅಸೋಸಿಯೇಷ್ ಫಾರ್ ದಿ ಬ್ಲೈಂಡ್ (ಕ್ಯಾಬಿ) ಬಯಸಿತು. ರೌಂಡ್ ರಾಬಿನ್ ಲೀಗ್ ಹಾಗೂ ನಾಕೌಟ್ ಆಧಾರದಲ್ಲಿ ಭಾರತಾದ್ಯಂತ 48 ಪಂದ್ಯಗಳು ನಡೆಯಲಿದ್ದು ಮೂರನೇ ಟಿ-20 ವಿಶ್ವಕಪ್ ಇದಕ್ಕೆ ಸಾಕ್ಷಿಯಾಗಲಿದೆ.
 
ಭಾರತದ ಪುರುಷರ ಹಾಗು ಮಹಿಳೆಯರ ಅಂಧರ ಕ್ರಿಕೆಟ್ ತಂಡಗಳು ವಿಶ್ವ ಅಂಧರ ಕ್ರಿಕೆಟ್ ನಲ್ಲಿ ಆಡಲಿವೆ ಎಂದು ಕ್ರಿಕೆಟ್ ಅಸೋಸಿಯೇಷ್ ಫಾರ್ ದಿ ಬ್ಲೈಂಡ್ ( ಕ್ಯಾಬಿ) ಖಚಿತಪಡಿಸಿತು. ಈ ಬಗೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಅಂತರಾಷ್ಟ್ರೀಯ ಅಂಧರ ಕ್ರೀಡಾ ಅಸೋಸಿಯೇಷನ್ (ಐಬಿಎಸ್ಎ) ಆಯೋಜಿಸುತ್ತಿದ್ದು ಯುನೈಟೆಡ್ ಕಿಂಗ್‌ಡಂ ಬರ್ಮಿಂಗ್ ಹ್ಯಾಂನಲ್ಲಿ 18 ಹಾಗೂ 27 ಆಗಸ್ಟ್ 2023ರಲ್ಲಿ ನಡೆಯಲಿದೆ.
 
ಈ ವಾರ್ಷಿಕ ಸಭೆಯಲ್ಲಿ ಅಂಧರ ಕ್ರಿಕೆಟನ್ನು ವಿಶ್ವಾದ್ಯಂತ ಉತ್ತೇಜಿಸುವ ಬಗ್ಗೆ, ಅದರ ಸವಾಲುಗಳು ಹಾಗೂ ಅಂಧ ಕ್ರಿಕೆಟರಿಗೆ ಸಮಾನ ಅವಕಾಶಗಳ ಬಗ್ಗೆ ಚರ್ಚೆಗಳಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X