ಅಕ್ರಮ ಮರ ಸಾಗಾಟ ಪ್ರಕರಣ: ಜಾಗೃತ ದಳದಿಂದ ಸ್ಕ್ವಾಡ್ ತನಿಖೆಗೆ ಯು.ಟಿ.ಖಾದರ್ ಒತ್ತಾಯ

ಮಂಗಳೂರು, ಜ.29: ಬೆಳ್ತಂಗಡಿ ತಾಲೂಕಿನಲ್ಲಿ ರಿಸರ್ವೇ ಫಾರೆಸ್ಟ್ ಮರಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ವಾಹನಗಳನ್ನು ವಶಪಡಿಸಿದ ಅರಣ್ಯ ಅಧಿಕಾರಿಯನ್ನು ವರ್ಗಾಯಿಸಿದ ಪ್ರಕರಣ ಕುರಿತು ರಾಜ್ಯ ಮಟ್ಟದ ಜಾಗೃತ ದಳದಿಂದ (ವಿಜಿಲೆನ್ಸ್ ಸ್ಕ್ವಾಡ್)ನಿಂದ ತನಿಖೆ ನಡೆಸುವಂತೆ ಶಾಸಕ ಯು.ಟಿ ಖಾದರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುಮಾರು 500 ಮರಗಳನ್ನು ಕಡಿಯಲಾಗಿದೆ. ಇದರಲ್ಲಿ 80 ಮರಗಳು ಮಾತ್ರ ವಶಪಡಿಸಿರುವುದು. ಉಳಿದ ಮರಗಳು ಎಲ್ಲಿ ಹೋಯಿತು? ಇದರ ಹಿಂದೆ ಯಾರು ಇದ್ದಾರೆ ? ಎನ್ನುವುದು ಸಮರ್ಪಕ ತನಿಖೆಯಿಂದ ಮಾತ್ರ ಹೊರಬರುವುದು ಸಾಧ್ಯ. ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ನ್ಯಾಯಯುತ ತನಿಖೆ ಸಾಧ್ಯವಾಗದು ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸಂತೋಷ್ ಕುಮಾರ್, ಝಕರಿಯಾ, ಮುರಳೀಧರ ಶೆಟ್ಟಿ ಉಪಸ್ಥಿತರಿದ್ದರು.
Next Story