ಪಾವಗಡ: ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಮಕ್ಕಳು ಮೃತ್ಯು

ಪಾವಗಡ,ಜ,29: ಕೆರೆ ನೋಡಲು ಒಂದೇ ಕುಟುಂಬದ ಹೋದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಪಾವಗಡ ತಾಲೂಕಿನ ನಿಡಿಗಲ್ ಗ್ರಾಮದಲ್ಲಿ ನಡೆದಿದೆ .
ಮೃತರನ್ನು ನಿಡಿಗಲ್ ಗ್ರಾಮದ ಭಾಷಾ ಅವರ ಮಕ್ಕಳಾದ ಶರೀಫ್ (10 ವರ್ಷ ) , ಚಾಂದ್ .ಬಿ (13 ವರ್ಷ), ಬಾನು (14 ವರ್ಷ) ಎಂದು ಗುರುತಿಸಲಾಗಿದೆ.
ತಾಲೂಕಿನ ನಿಡಿಗಲ್ ಗ್ರಾಮದ ಒಂದೇ ಕುಟುಂಬದ ಮೂರು ಮಕ್ಕಳು ಎಸ್ ಆರ್ ಪಾಳ್ಯದ ಕೆರೆ ಕುಂಟೆಯಲ್ಲಿ ಹೇಡಿ ಹಿಡಿಯಲು ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story





