ʼಪೆಗಾಸಸ್ ಡೀಲ್ʼ ಬಯಲಿಗೆಳೆದ ನ್ಯೂಯಾರ್ಕ್ ಟೈಮ್ಸ್ ಅನ್ನು ʼಸುಪಾರಿ ಮೀಡಿಯಾʼ ಎಂದ ಕೇಂದ್ರ ಸಚಿವ ವಿ.ಕೆ ಸಿಂಗ್

ಹೊಸದಿಲ್ಲಿ: ಭಾರತೀಯ ಪತ್ರಕರ್ತರನ್ನು 'ಪ್ರೆಸ್ಟಿಟ್ಯೂಟ್' ಎಂದು ಕರೆದು ವಿವಾದ ಸೃಷ್ಟಿಸಿದ್ದ ಕೇಂದ್ರ ಸಚಿವ ವಿಕೆ ಸಿಂಗ್, ಪೆಗಾಸಸ್ ಕುರಿತು ವರದಿ ಮಾಡಿದ ನ್ಯೂಯಾರ್ಕ್ ಟೈಮ್ಸ್ ಅನ್ನು 'ಸುಪಾರಿ ಮೀಡಿಯಾ' ಎಂದು ಕರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2017 ರಲ್ಲಿ ಇಸ್ರೇಲ್ ಭೇಟಿಯ ಸಂದರ್ಭದಲ್ಲಿ ಪೆಗಾಸಸ್ ಸ್ಪೈವೇರ್ ಖರೀದಿಯನ್ನು ಒಳಗೊಂಡ ರಕ್ಷಣಾ ಒಪ್ಪಂದಕ್ಕೆ ಹೇಗೆ ಸಹಿ ಹಾಕಿದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಈ ಹೇಳಿಕೆ ನೀಡಿದ್ದಾರೆ.
ಪೆಗಾಸಸ್ ಕುರಿತ ಸುದ್ದಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಸಿಂಗ್, ʼನೀವು NYT ಅನ್ನು ನಂಬಬಹುದೇ? ಅವುಗಳನ್ನು "ಸುಪಾರಿ ಮೀಡಿಯಾ" ಎಂದು ಕರೆಯಲಾಗುತ್ತದೆʼ ಎಂದು ಟ್ವೀಟ್ ಹಾಕಿದ್ದಾರೆ.
ಭಾರತ ಸರ್ಕಾರ 2017 ರಲ್ಲಿ ಪೆಗಾಸಸ್ ಸಾಫ್ಟವೇರ್ ಚಂದಾದಾರಿಕೆ ಮಾಡಿಕೊಂಡಿತ್ತು ಎಂಬ ನ್ಯೂಯಾರ್ಕ್ ಟೈಮ್ಸ್ ವರದಿ ಬೆನ್ನಲ್ಲೇ, ಕೇಂದ್ರ ಸರ್ಕಾರದ ಮೂಲಗಳು, ಸುಪ್ರೀಂ ಕೋರ್ಟ್ ತನಿಖಾ ಸಮಿತಿಯು ಪೆಗಾಸಸ್ ಕುರಿತು ಕೂಲಂಕುಷವಾಗಿ ಗಮನಿಸುತ್ತಿದೆ, ಸಮಿತಿಯು ವರದಿಗೆ ಸರ್ಕಾರ ಕಾಯುತ್ತಿದೆ ಎಂದು ಹೇಳಿತ್ತು.
Can you trust NYT?? They are known " Supari Media ". https://t.co/l7iOn3QY6q
— General Vijay Kumar Singh (@Gen_VKSingh) January 29, 2022







