ಪುತ್ತೂರು: ಜ.30ರಂದು ಮರ್ಕಝುಲ್ ಹುದಾ ಪದವಿ ಕಾಲೇಜು ಡಿಗ್ರಿ ಬ್ಲಾಕ್ ಉದ್ಘಾಟನೆ

ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ, ಪುತ್ತೂರು ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಮರ್ಕಝುಲ್ ಹುದಾ ಪದವಿ ಕಾಲೇಜು ಡಿಗ್ರಿ ಬ್ಲಾಕ್ ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭ ಜ.30 ರಂದು ಬೆಳಗ್ಗೆ 10:00 ಗಂಟೆಗೆ ಕುಂಬ್ರದ ಮರ್ಕಝುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಕುಂಬ್ರದ ನಿರ್ದೇಶಕರಾದ ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಪ್ರಾರ್ಥನೆ ನೆರವೇರಿಸಲಿದ್ದು, ಮರ್ಕಝ್ ನಾಲೆಜ್ ಸಿಟಿಯ ವ್ಯವಸ್ಥಾಪಕರಾದ ಡಾ. ಅಬ್ದುಲ್ ಹಕೀಂ ಅಝ್‍ಹರಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮವನ್ನು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಶಾಫಿ ಸಅದಿ ಉದ್ಘಾಟಿಸಲಿದ್ದು, MHK ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಫಾರೂಖ್ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿ.ಎಂ. ಫಾರೂಕ್, ಝಕರಿಯ ಜೋಕಟ್ಟೆ, ಎಸ್. ಎಮ್. ರಶೀದ್, ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಹಾಜಿ ಅಬೂಬಕರ್ ರೈಸ್ಕೋ, ಕೆ.ಪಿ. ಅಹ್ಮದ್ ಹಾಜಿ, ಇಸ್ಮಾಯಿಲ್ ಹಾಜಿ ಬೈತಡ್ಕ, ಕೆ. ಪಿ. ಮುಹಮ್ಮದ್ ಹಾಜಿ, ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲ್, ಹಾಜಿ ಕೆ.ಸಿ.ಇಸ್ಮಾಯಿಲ್ ಕಿನ್ಯ ಭಾಗವಹಿಸಲಿದ್ದಾರೆ.
ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಯು.ಕೆ. ಮುಹಮ್ಮದ್ ಸಅದಿ ವಳವೂರು, ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಕೆ.ಬಿ. ಖಾಸಿಂ ಹಾಜಿ ಮಿತ್ತೂರು, ಎಸ್. ಎಂ. ಬಶೀರ್ ಹಾಜಿ ಶೇಕಮಲೆ, ಅನ್ವರ್ ಹುಸೈನ್ ಗೂಡಿನಬಳಿ, ಶಾಹುಲ್ ಹಮೀದ್ ಉಜಿರೆ, ಖಮರುದ್ದೀನ್ ಗೂಡಿನಬಳಿ, ನೌಷಾದ್ ಪೋಳ್ಯ, ಶಂಸುದ್ದೀನ್ ಬೈರಿಕಟ್ಟೆ, ಮುಹಮ್ಮದ್ ಬಶೀರ್ ಇಂದ್ರಾಜೆ, ಅಬ್ದುರ್ರಹೀಂ ಅರ್ಕುಳ, ಶಂಸುದ್ದೀನ್ ಬೈರಿಕಟ್ಟೆ ಉಪಸ್ಥಿತರಿಲಿದ್ದಾರೆ ಎಂದು ಮರ್ಕಝುಲ್ ಹುದಾ ರಾಷ್ಟ್ರೀಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.







