ಹೆಜಮಾಡಿ ಗಂಗಯ್ಯ ಆಚಾರ್ಯ

ಪಡುಬಿದ್ರಿ: ಹೆಜಮಾಡಿಯ ಪತ್ರಿಕಾ ವಿತರಕರಾದ ದಿವಾಕರ ಆಚಾರ್ಯರ ತಂದೆ ಹೆಜಮಾಡಿ ಗಂಗಯ್ಯ ಆಚಾರ್ಯ(87) ಅಲ್ಪಕಾಲದ ಅಸೌಖ್ಯದಿಂದ ಜ.28ರಂದು ಹೆಜಮಾಡಿಯ ಸ್ವಗೃಹ ಅಜಲ್ ತೋಟ ನಿವಾಸದಲ್ಲಿ ನಿಧನರಾದರು.
ಹೆಜಮಾಡಿ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಸುಮಾರು 35 ವರ್ಷಗಳಿಂದ ಹೆಜಮಾಡಿ ಪೇಟೆಯಲ್ಲಿ ಅಂಗಡಿ ನಡೆಸುತ್ತಿದ್ದು, ಜನಾನುರಾಗಿಯಾಗಿದ್ದರು. ಅವರು ಇಬ್ಬರು ಪುತ್ರಿಯರು, 7 ಪುತ್ರರನ್ನು ಅಗಲಿದ್ದಾರೆ.
Next Story





