ಇಂಡಿಯಾ ಟಿವಿ ಕಾರ್ಯಕ್ರಮದ ಸ್ಕ್ರೀನ್ ನಲ್ಲಿ ರಾಮಮಂದಿರದ ಫೋಟೊ: ನಿರೂಪಕನಿಗೆ ಟಿಕಾಯತ್ ತರಾಟೆ

Photo: Twitter/@zoo_bear
ಹೊಸದಿಲ್ಲಿ: ಬಿಜೆಪಿಯ ವಿಭಜಕ ಕಾರ್ಯಸೂಚಿಯನ್ನು ಮುಂದಿಡುತ್ತಿದ್ದಾರೆ ಎಂದು ಆರೋಪಿಸಿ ರಜತ್ ಶರ್ಮಾ ಅವರ 'ಇಂಡಿಯಾ ಟಿವಿ' ವಾಹಿನಿಯ ನಿರೂಪಕನ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇಂಡಿಯಾ ಟಿವಿ ಆಯೋಜಿಸಿದ ಸಂವಾದದ ವೇದಿಕೆಯಲ್ಲಿ ರಾಮಮಂದಿರದ ಚಿತ್ರ ಪ್ರದರ್ಶಿಸಿರುವುದನ್ನು ತೋರಿಸಿದ ಟಿಕಾಯತ್, ಬಿಜೆಪಿಯ ವಿಭಜಕ ತಂತ್ರಗಳನ್ನು ನೀವು ಯಾಕೆ ಪ್ರಮೋಟ್ ಮಾಡುತ್ತಿದ್ದೀರಿ ಎಂದು ವೇದಿಕೆಯಲ್ಲೇ ನಿರೂಪಕನನ್ನು ಪ್ರಶ್ನಿಸಿದ್ದಾರೆ.
“ಇದನ್ನು (ರಾಮ ಮಂದಿರದ ಫೋಟೋ) ತೋರಿಸಲು ನಿಮಗೆ ಯಾವ ಒತ್ತಾಯಗಳಿವೆ? ಯಾರ ಪರ ಪ್ರಚಾರ ಮಾಡುತ್ತಿದ್ದೀರಿ? ನೀವು ಯಾರ ಆದೇಶವನ್ನು ಅನುಸರಿಸುತ್ತಿದ್ದೀರಿ?” ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.
ಇಂಡಿಯಾ ಟಿವಿ ಆ್ಯಂಕರ್ ಸೌರಭ್ ಶರ್ಮಾ ಅವರು ಟಿಕಾಯತ್ ಪ್ರಶ್ನೆಗೆ ಸಮರ್ಥನೆ ನೀಡಲು ಪ್ರಯತ್ನಿಸಿದಾಗ, ಮಧ್ಯಪ್ರವೇಶಿಸಿದ ಟಿಕಾಯತ್, “ನೀವು ಈಗ ಮಂದಿರ ಮತ್ತು ಮಸೀದಿಯನ್ನು ತೋರಿಸುತ್ತೀರಾ? ನೀವು ಇದನ್ನು ತೋರಿಸಲು ಸಾಧ್ಯವಿಲ್ಲ. ನೀವು ಟಿವಿ ಚಾನೆಲ್ಗಳು ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡುವಂತಿಲ್ಲ.” ಎಂದು ಹೇಳಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂಡಿಯಾ ಟಿವಿಯ ವೃತ್ತಿಪರತೆಯ ಕುರಿತು ನೆಟ್ಟಿಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ನೀಟ್ ಟಾಪರ್ಗೆ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಪ್ರಕಟಿಸಿದ ‘ವಿಶ್ವವಾಣಿ’!
"मंदिर और मस्जिद दिखाओगे आप इसपे? आप चैनल वाले किसी का प्रचार नहीं कर सकते। चैनल वाले देश को बरबाद करना चाहते हैं. क्या मजबूरी है ये दिखाने की? आप किसका प्रचार कर रहे हैं? देश इसे चलता है क्या?" - @RakeshTikaitBKU
— Mohammed Zubair (@zoo_bear) January 29, 2022
गोदी मिडिया धर्म को बढ़ावा देकर राजनीती खेल खेल रही है.. pic.twitter.com/ACQYUVRrVq
#ChunavManch | नरम-गरम टिकैत, एंकर ने निकाली हवा
— India TV (@indiatvnews) January 29, 2022
देखिए, राम मंदिर की तस्वीर देख बौखलाए किसान नेता @RakeshTikaitBKU, LIVE शो में लगे चिल्लाने, एंकर ने लगाई झाड़..@journosaurav #ChunavManch2022 #UPElections #ElectionWithIndiaTV #FarmersProtest pic.twitter.com/hyQm3GUmxK
ऊपर लिखा है "किसान का मुख्यमंत्री कौन?"और नीचे फोटो दिखाई जा रही थी मंदिर-मस्जिद की।
— Inderjeet Barak (@inderjeetbarak) January 29, 2022
फिर क्या था?
रजत शर्मा के इंडिया टीवी वाले पेल दिए गए!खेतों में चरती अवारा गाय ही दिखा देते हॉस्पिटल तो बहुत बड़ा हो जाता!
वाह! @RakeshTikaitBKU साहब!जिंदाबाद। pic.twitter.com/XxPJIpdGl7
ये तो ग़ज़बे कर दिए हैं ! pic.twitter.com/MAaNIKHbJg
— Umashankar Singh उमाशंकर सिंह (@umashankarsingh) January 29, 2022







