ಕಾಶ್ಮೀರದಲ್ಲಿ ಅವಳಿ ಎನ್‌ಕೌಂಟರ್: ಐವರು ಉಗ್ರರ ಹತ್ಯೆ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬುಡಗಾಂ ಮತ್ತು ಪುಲ್ವಾನಾ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಐದು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಎನ್‌ಕೌಂಟರ್‌ಗಳಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಮತ್ತು ಜೈಶ್ ಇ ಮೊಹ್ಮದ್ ಸಂಘಟನೆಯ ಐದು ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ವಿಜಯ ಕುಮಾರ್ ಹೇಳಿದ್ದಾರೆ.
ಮೃತಪಟ್ಟವರಲ್ಲಿ ಜೆಇಎಂ ಕಮಾಂಡರ್ ಝಹೀದ್ ವಾನಿ ಮತ್ತು ಪಾಕಿಸ್ತಾನಿ ಉಗ್ರ ಸೇರಿದ್ದಾರೆ. ಇದು ಭದ್ರತಾ ಪಡೆಗಳ ದೊಡ್ಡ ಯಶಸ್ಸು ಎಂದು ಅವರು ಬಣ್ಣಿಸಿದ್ದಾರೆ.
ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಪುಲ್ವಾನಾ ಪ್ರದೇಶದ ನಾಯಿರಾದಲ್ಲಿ ಎನ್‌ಕೌಂಟರ್ ನಡೆಯುತ್ತಿದೆ ಎಂದು ಶನಿವಾರ ಸಂಜೆ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದರು. ದಕ್ಷಿಣ ಕಾಶ್ಮೀರದ ಜಿಲ್ಲೆಯಲ್ಲಿ ರಾತ್ರಿಯೂ ನಡೆದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಉಗ್ರರು ಹತರಾದರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಯಿತು.
ಕೇಂದ್ರ ಕಾಶ್ಮೀರದ ಬುಡಗಾಂವ್ ಪ್ರದೇಶದ ಚರಾರ್ ಐ ಶರೀಫ್‌ನಲ್ಲಿ ನಡೆದ ಇನ್ನೊಂದು ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಸಂಘಟನೆಯ ಒಬ್ಬ ಉಗ್ರ ಮೃತಪಟ್ಟಿದ್ದಾನೆ. ಎಕೆ-56 ರೈಫಲ್ ಸೇರಿದಂತೆ ಉಗ್ರರಿಂದ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.







