ಕುಂದಾಪುರ: ಹಂಗಳೂರಿನ 'ಯುನಿಟಿ ಅಪಾರ್ಟ್‌ಮೆಂಟ್' ಶುಭಾರಂಭ

ಕುಂದಾಪುರ: ಕುಂದಾಪುರ ಹಂಗಳೂರಿನ ಹುಲಿಹಾಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾದ ಸರ್ವ ಸುಸಜ್ಜಿತ ಯುನಿಟಿ ಅಪಾರ್ಟ್‌ಮೆಂಟ್ ರವಿವಾರ ಶುಭಾರಂಭಗೊಂಡಿತು.
ನೂತನ ಅಪಾರ್ಟ್‌ಮೆಂಟನ್ನು ಹಿರಿಯರಾದ ಇದ್ದಿನಬ್ಬ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ಉಸ್ಮಾನ್ ಹಂಗಳೂರು, ಮುಹಮ್ಮದ್ ಯುಸೂಫ್, ಹುಸೇನ್ ಬ್ಯಾರಿ, ಜಲೀಲ್ ಹಾಸನ, ಅಬೂಬಕ್ಕರ್ ಕುನ್ನೂರು ಮೊದಲಾದವರು ಉಪಸ್ಥಿತರಿದ್ದರು.
ನೆಲಮಹಡಿ ಸೇರಿದಂತೆ ಎರಡು ಮೇಲಂತಸ್ತು ಹೊಂದಿರುವ ಈ ಅಪಾರ್ಟ್ ಮೆಂಟ್‌ನಲ್ಲಿ ಒಟ್ಟು 13 ಫ್ಲಾಟ್‌ಗಳಿವೆ. ಇಲ್ಲಿ ಜನರೇಟರ್, ಸೋಲಾರ್ ಸಿಸ್ಟಮ್, 24 ಗಂಟೆ ನೀರು ಪೂರೈಕೆ, ವಿದ್ಯುತ್, ಸೆಕ್ಯೂರಿಟಿ, ಪಾರ್ಕಿಂಗ್ ಹಾಗೂ ಸಿಸಿ ಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಉಸ್ಮಾನ್ ಹಂಗಳೂರು ತಿಳಿಸಿದ್ದಾರೆ
Next Story