ಮಂಗಳೂರು ಅಝಹರಿಯಾದಲ್ಲಿ ಅಧ್ಯಾಪಕ ತರಬೇತಿ ಇನ್ ಸರ್ವಿಸ್ ಕೋರ್ಸ್ ಪ್ರಾರಂಭ

ಮಂಗಳೂರು: ಕೇಂದ್ರ ಜುಮಾ ಮಸೀದಿಯ ಅಝಹರಿಯಾ ಅಂತಿಮ ವರ್ಷದ ಪದವಿಪೂರ್ವ ದರ್ಸ್ ವಿದ್ಯಾರ್ಥಿಗಳಿಗೆ ಅಧ್ಯಾಪಕ ತರಬೇತಿ ಇನ್ ಸರ್ವಿಸ್ ಕೋರ್ಸ್ ಅಝಹರಿಯಾ ಕೇಂದ್ರ ಮದರಸದಲ್ಲಿ ಪ್ರಾರಂಭಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಐ. ಮೊಯಿದಿನಬ್ಬ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಅಝಹರಿಯಾ ಮುದರ್ರಿಸ್ ಕೆ. ಎಂ.ಹೈದರ್ ಮದನಿ ಕರಾಯ ಉದ್ಘಾಟಿಸಿದರು.
ಅಝಹರಿಯಾ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಮುದ್ರರಿಸ್ ಅಬೂಬಕರ್ ಮದನಿ ಶುಭ ಹಾರೈಸಿದರು.
ಶಿಶು ಸ್ನೇಹಿ ಶಿಕ್ಷಣ, ಮನಶಾಸ್ತ್ರ, ದಾಖಲೆ ಪುಸ್ತಕಗಳ ಉಪಯೋಗ ಕ್ರಮ ಮೊದಲಾದ ವಿಷಯಗಳಲ್ಲಿ ತರಗತಿ ನಡೆಯಲಿದ್ದು, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಶಿಕ್ಷಣಾಧಿಕಾರಿಯಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ತರಗತಿ ನಡೆಸಿಕೊಡಲಿದ್ದಾರೆ.
ಮಾರ್ಚ್ ಮೊದಲ ವಾರ ಟ್ರೈನಿಂಗ್, ಕುರ್ ಆನ್ ಹಾಗೂ ದರ್ಸ್ ಕೋರ್ಸ್ ಗಳ ಪರೀಕ್ಷೆ ನಡೆಯಲಿದೆ.
Next Story