ಎನ್‍ಇಪಿ ಜಾರಿ ಹೊಣೆ: ಹೊಸ ಹುದ್ದೆ ಸೃಷ್ಟಿಗೆ ನಿರ್ದೇಶನ

ಬೆಂಗಳೂರು, ಜ. 30: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ವಿಭಾಗಕ್ಕೆ ಐಎಎಸ್ ಅಧಿಕಾರಿಯೊಬ್ಬರನ್ನು ನಿಯುಕ್ತಿಗೊಳಿಸಲು ಅಗತ್ಯ ಹುದ್ದೆ ಸೃಷ್ಟಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ್ದಾರೆ.
`ಎನ್‍ಇಪಿಯನ್ನು ಅನುಷ್ಠಾನಗೊಳಿಸಲು ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಮಾಹಿತಿ ಕ್ರೋಡೀಕರಿಸುವುದು ಮಹತ್ತ್ವದ ಜವಾಬ್ದಾರಿಯಾಗಿದೆ. ಜತೆಗೆ, ವಿಶ್ವವಿದ್ಯಾಲಯಗಳ ಬೇಡಿಕೆಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವುದು ಕೂಡ ಮುಖ್ಯವಾಗಿದೆ. ಹೀಗಾಗಿ, ಹೊಸ ಹುದ್ದೆಯ ಸೃಷ್ಟಿ ಅಗತ್ಯವಾಗಿದೆ' ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
Next Story





