‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ ದಿಲ್ಲಿ ಕೋರ್ಟ್

PHOTO : PTI
ಹೊಸದಿಲ್ಲಿ, ಜ. 30: ‘ಬುಲ್ಲಿ ಬಾಯಿ’ ಆ್ಯಪ್ ಅನ್ನು ರೂಪಿಸಿದ ನೀರಜ್ ಬಿಷ್ಣೋಯಿಯ ಜಾಮೀನು ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ತಿರಸ್ಕರಿಸಿದೆ.
ನೀರಜ್ ಬಿಷ್ಣೋಯಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ, ‘‘ಅಪರಾಧದ ಸ್ವರೂಪ, ಆರೋಪದ ಗಂಭೀರತೆ ಹಾಗೂ ತನಿಖೆಯ ಆರಂಭಿಕ ಹಂತವನ್ನು ಗಮನಿಸಿದಾಗ ನನಗೆ ಈ ಅರ್ಜಿಯಲ್ಲಿ ಯಾವುದೇ ಅರ್ಹತೆ ಕಂಡು ಬಂದಿಲ್ಲ. ಆದುದರಿಂದ ಅರ್ಜಿ ವಜಾಗೊಳಿಸಲಾಗಿದೆ’’ ಎಂದರು.
ಈ ಪ್ರಕರಣದಲ್ಲಿ ಆರೋಪಿಗಳು ನಿರ್ದಿಷ್ಟ ಸಮುದಾಯದ ಸುಮಾರು 100 ಮಹಿಳಾ ಪತ್ರಕರ್ತರನ್ನು ಗುರಿಯಾಗಿರಿಸಿ ಸಾರ್ವಜನಿಕ ವೇದಿಕೆಯಲ್ಲಿ ನಿಂದಿಸಿದ್ದಾರೆ ಹಾಗೂ ಅವಮಾನಿಸಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ಮಹಿಳೆಯರಿಗೆ ಪವಿತ್ರ ಸ್ಥಾನ ನೀಡಿದ ಈ ಸಮಾಜದಲ್ಲಿ ಈ ಕೃತ್ಯ ಕೋಮ ಸಾಮರಸ್ಯದ ಮೇಲೆ ಖಂಡಿತವಾಗಿಯೂ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
Next Story





