ಬೆಂಗಳೂರು: ಮನೆ ನಿರ್ಮಿಸಿ ಕೊಡುವುದಾಗಿ ವಂಚನೆ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಬ್ರಿಗೇಡ್ ಗ್ರೂಪ್
ಬೆಂಗಳೂರು, ಜ. 30: ವಿಲ್ಲಾದ ನೋಂದಣಿ ಮಾಡಿ, ಕಳೆದ ವರ್ಷ ಜುಲೈ 28ರಂದು ಮಾಲ್ಕ ಇರಾನಿಗೆ ಬ್ರಿಗೇಡ್ ವಿಲ್ಲಾವನ್ನು ಹಸ್ತಾಂತರ ಪ್ರಕ್ರಿಯನ್ನು ಬ್ರಿಗೇಡ್ ಮಾಡಿದೆ. ಆದರೆ ಅವರು ಹಸ್ತಾಂತರದ ಪರಿಶೀಲನಾ ಪಟ್ಟಿಗೆ ಸಹಿ ಮಾಡಲು ನಿರಾಕರಿಸಿದರು ಎಂದು ಬ್ರಿಗೇಡ್ ಗ್ರೂಪ್ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಆಗಸ್ಟ್ 16ರಂದು ಗ್ರಾಹಕರು ಕ್ಲಬ್‍ಹೌಸ್‍ನಲ್ಲಿರುವ ಮೀಟಿಂಗ್ ರೂಮ್‍ಗೆ ನುಗ್ಗಿ, ನಮ್ಮ ಸಿಬ್ಬಂದಿಯೊಬ್ಬರನ್ನು ಮೌಖಿಕವಾಗಿ ಮತ್ತು ದೈಹಿಕವಾಗಿ ನಿಂದಿಸಿದ್ದರಿಂದ, ಗ್ರಾಹಕರ ವಿರುದ್ಧ ಎಫ್‍ಐಆರ್ ದಾಖಲಿಸಲು ನಮ್ಮನ್ನು ಪ್ರೇರೇಪಿಸಿತು ಎಂದು ತಿಳಿಸಿದೆ.
ವಿಲ್ಲಾ ಕೊಂಡ ಗ್ರಾಹಕರೊಂದಿಗೆ ಚರ್ಚೆಯಾದ ಬಳಿಕ ನೋಂದಣಿಗಾಗಿ ಗ್ರಾಹಕರು ಖರ್ಚು ಮಾಡಿದ ಮೊತ್ತ ಸೇರಿದಂತೆ ಸಂಪೂರ್ಣ ಮೊತ್ತವನ್ನು ಮರುಪಾವತಿಸಲು ಬ್ರಿಗೇಡ್ ಒಪ್ಪಿಕೊಂಡಿದೆ. ಇದನ್ನು ನಿರಾಕರಿಸಿದ, ಗ್ರಾಹಕರು ಮಾನಸಿಕ ಸಂಕಟಕ್ಕಾಗಿ ಹೆಚ್ಚುವರಿ ಪರಿಹಾರವನ್ನು ಕೋರುತ್ತಿದ್ದಾರೆ. ವಿಲ್ಲಾದ ವೆಚ್ಚಕ್ಕಿಂತ ಹೆಚ್ಚಿನದನ್ನು ಸರಿದೂಗಿಸಲು ಇದು ಕೇವಲ ಒಂದು ತಂತ್ರವಾಗಿದ್ದು, ಬ್ರಿಗೇಡ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಕಾಯುತ್ತಿದ್ದು ಎಂದು ಬ್ರಿಗೇಡ್‍ನ ಸಿಇಒ ರಾಜೇಂದ್ರ ಜೋಷಿ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದರು.







