ಅತ್ಯಾಚಾರದ ಶಂಕೆ: ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಆಟಗಾರ ಗ್ರೀನ್ವುಡ್ ಬಂಧನ

Photo:twitter
ಲಂಡನ್: ಮಹಿಳೆಯೊಬ್ಬರು ಘಟನೆಯೊಂದರ ದೃಶ್ಯ ಹಾಗೂ ಆಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಮೇಸನ್ ಗ್ರೀನ್ವುಡ್ ಅವರನ್ನು ರವಿವಾರ ಅತ್ಯಾಚಾರ ಹಾಗೂ ಹಲ್ಲೆಯ ಶಂಕೆಯ ಮೇಲೆ ಬಂಧಿಸಲಾಯಿತು.
20 ವರ್ಷದ ಫಾರ್ವರ್ಡ್ ಆಟಗಾರನು "ಮುಂದಿನ ಸೂಚನೆ ಬರುವವರೆಗೆ ತರಬೇತಿಗೆ ಅಥವಾ ಪಂದ್ಯಗಳನ್ನು ಆಡುವುದಿಲ್ಲ' ಎಂದು ಯುನೈಟೆಡ್ ಹೇಳಿದೆ.
ಪೊಲೀಸರು ಗ್ರೀನ್ವುಡ್ ಅನ್ನು ಹೆಸರಿಸಲಿಲ್ಲ. ಆದರೆ ಫುಟ್ಬಾಲ್ ಆಟಗಾರನ ವಿಚಾರಣೆಯ ನಂತರ ತನಿಖೆಯ ಹೇಳಿಕೆಯನ್ನು ಒದಗಿಸಲಾಗಿದೆ.
ಅತ್ಯಾಚಾರ ಮತ್ತು ಹಲ್ಲೆಯ ಶಂಕೆಯ ಮೇಲೆ 20 ವರ್ಷದವನನ್ನು ಬಂಧಿಸಲಾಗಿದೆ. ಆತ ವಿಚಾರಣೆಗಾಗಿ ಕಸ್ಟಡಿಯಲ್ಲಿ ಉಳಿದಿದ್ದು ವಿಚಾರಣೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story