ಕೇಂದ್ರ ಸರಕಾರದ ವಿರುದ್ಧ ರೈತರಿಂದ ನಾಳೆ ‘ವಂಚನಾ ದಿನ’ ಆಚರಣೆ: ಬಿಕೆಯು ನಾಯಕ ರಾಕೇಶ್ ಟಿಕಾಯತ್

ರಾಕೇಶ್ ಟಿಕಾಯತ್
ನೊಯ್ಡಾ,ಜ.30: ಕೇಂದ್ರ ಸರಕಾರದಿಂದ ವಂಚನೆಯನ್ನು ಆರೋಪಿಸಿರುವ ಭಾರತೀಯ ಕಿಸಾನ ಯೂನಿಯನ್ (ಬಿಕೆಯು) ನಾಯಕ ರಾಕೇಶ ಟಿಕಾಯತ್ ಅವರು,ಕೃಷಿ ಸಮಸ್ಯೆಗಳ ಕುರಿತಂತೆ ಸೋಮವಾರ ದೇಶವ್ಯಾಪಿ ‘ವಂಚನಾ ದಿನ’ವನ್ನು ಆಚರಿಸಲಾಗುವುದು ಎಂದು ರವಿವಾರ ಪ್ರಕಟಿಸಿದ್ದಾರೆ.
ಡಿ.9ರಂದು ಸರಕಾರವು ನೀಡಿದ್ದ ಭರವಸೆಗಳ ಪತ್ರದ ಆಧಾರದಲ್ಲಿ ವರ್ಷದಿಂದಲೂ ನಡೆಯುತ್ತಿದ್ದ ರೈತರ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಾಗಿತ್ತು,ಆದರೆ ಆ ಬೇಡಿಕೆಗಳು ಇನ್ನೂ ಈಡೇರಿಲ್ಲ. ಸರಕಾರವು ರೈತರನ್ನು ವಂಚಿಸಿರುವುದರಿಂದ ಜ.31ರಂದು ‘ವಂಚನಾ ದಿನ’ವನ್ನು ಆಚರಿಸಲಾಗುತ್ತದೆ ಎಂದು ಅವರು ಟ್ವೀಟಿಸಿದ್ದಾರೆ.
Next Story





