ಮರ್ಧಾಳ: ನೆಕ್ಕಿತ್ತಡ್ಕ ದರ್ಗಾದಿಂದ ಕಳ್ಳತನ, ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಸೆರೆ

ಕಡಬ, ಜ.31. ಇಲ್ಲಿನ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ದರ್ಗಾದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ನಗದು ದೋಚಿರುವ ಘಟನೆ ಇಂದು ಬೆಳಗ್ಗಿನ ಜಾವ ನಡೆದಿದೆ.
ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ದರ್ಗಾದ ಬೀಗವನ್ನು ಒಡೆದು ಒಳನುಗ್ಗಿರುವುದು ದರ್ಗಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಒಂದು ಬೀಗವನ್ನು ಒಡೆದಿರುವ ಕಳ್ಳರು, ಎರಡನೇ ಬೀಗವನ್ನು ಒಡೆಯಲಾಗದ ಕಾರಣ ಬಾಗಿಲಿನ ಚಿಲಕವನ್ನೇ ಮುರಿದಿದ್ದಾರೆ. ದರ್ಗಾದಲ್ಲಿದ್ದ ಸುಮಾರು 30 ಸಾವಿರ ರೂ.ಗೂ ಅಧಿಕ ಹಣವನ್ನು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Next Story