4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ಹೋಲ್ಡರ್: ಇಂಗ್ಲೆಂಡ್ ವಿರುದ್ಧ ವಿಂಡೀಸ್ ಗೆ ರೋಚಕ ಜಯ

Photo: Twitter/@ICC
ಬ್ರಿಡ್ಜ್ ಟೌನ್: ಆಲ್ ರೌಂಡರ್ ಜೇಸನ್ ಹೋಲ್ಡರ್ (5-25)ಅವರ ಅಮೋಘ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 17 ರನ್ಗಳ ರೋಚಕ ಗೆಲುವು ದಾಖಲಿಸಿದೆ.
ಮಾಜಿ ನಾಯಕ ಹೋಲ್ಡರ್ ಕೊನೆಯ ಓವರ್ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದು ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಹೋಲ್ಡರ್ ಅವರು ಟ್ವೆಂಟಿ-20 ಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ವೆಸ್ಟ್ ಇಂಡೀಸ್ ಪುರುಷ ಕ್ರಿಕೆಟಿಗ ಎನಿಸಿಕೊಂಡರು.
ಹೋಲ್ಡರ್ ಸಾಹಸದಿಂದ ವೆಸ್ಟ್ ಇಂಡೀಸ್ ತಂಡ ಆಂಗ್ಲರ ವಿರುದ್ಧ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ.
ಮಹಿಳಾ ತಾರೆ ಅನಿಸಾ ಮೊಹಮ್ಮದ್ 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಗಳಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ವೆಸ್ಟ್ ಇಂಡೀಸ್ ಕ್ರಿಕೆಟರ್ ಆಗಿದ್ದರು. ಆಲ್ ರೌಂಡರ್ ಸ್ಟೆಫಾನಿ ಟೇಲರ್ ಕೂಡ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆದಿದ್ದಾರೆ. ಟೇಲರ್ ಪಾಕಿಸ್ತಾನ ವಿರುದ್ಧ 2021 ರಲ್ಲಿ ಪಾಕ್ ವಿರುದ್ಧ ಈ ಸಾಧನೆ ಮಾಡಿದ್ದರು.
ಪಂದ್ಯದ ಅಂತಿಮ ಓವರ್ನಲ್ಲಿ ಇಂಗ್ಲೆಂಡ್ ಗೆಲ್ಲಲು 20 ರನ್ ಅಗತ್ಯವಿರುವಾಗ ಹೋಲ್ಡರ್ ಅವರು ಕ್ರಿಸ್ ಜೋರ್ಡಾನ್, ಸ್ಯಾಮ್ ಬಿಲ್ಲಿಂಗ್ಸ್, ಆದಿಲ್ ರಶೀದ್ ಹಾಗೂ ಸಾಕಿಬ್ ಮಹಮೂದ್ ಅವರನ್ನು ಸತತ ಎಸೆತಗಳಿಂದ ಔಟ್ ಮಾಡಿದರು ಹಾಗೂ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದರು.
ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ 20 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 179 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಇಬ್ಬರೂ ಆರಂಭಿಕ ಆಟಗಾರರಾದ ಜೇಸನ್ ರಾಯ್ ಹಾಗೂ ಟಾಮ್ ಬಂಟನ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಇಂಗ್ಲೆಂಡ್ 19.5 ಓವರ್ ಗಳಲ್ಲಿ 162 ರನ್ ಗೆ ಆಲೌಟಾಯಿತು.
What a match Jason holder last over 4 balls 4 wkts
— Malik Naveed (@NaveedMasoom1) January 30, 2022
Caribbean team won the final match and series by 3-2
England need last over 18 runs #WestIndies champion pic.twitter.com/SubIDtb46M