ಗುರುಪುರ ಬಂಟರ ಮಾತೃ ಸಂಘದಿಂದ ನೆರವು

ಮಂಗಳೂರು, ಜ.31: ಗುರುಪುರ ಬಂಟರ ಮಾತೃ ಸಂಘ(ರಿ)ದ ಮಾಸಿಕ ಸಭೆಯು ರವಿವಾರ ಗುರುಪುರ ಕುಕ್ಕುದಕಟ್ಟೆಯ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತೆಂಕುಳಿಪಾಡಿ ಗ್ರಾಮದ ಜಗದೀಶ್ ರೈ ಹಾಗೂ ಮೂಡುಶೆಡ್ಡೆಯ ಸುನೀತಾ ಶೆಟ್ಟಿಯ ಮನೆ ನಿರ್ಮಾಣಕ್ಕೆ ಪ್ರಥಮ ಹಂತದ ತಲಾ 50,000 ರೂ ಆರ್ಥಿಕ ನೆರವು ವಿತರಿಸಲಾಯಿತು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಉಪಾಧ್ಯಕ್ಷ ಪ್ರವೀಣ್ ಆಳ್ವ ಕಡೆಗುಂಡ್ಯ, ಖಜಾಂಚಿ ಜಯರಾಮ ಶೆಟ್ಟಿ ವಿಜೇತ, ನಾಗರಾಜ ರೈ ತಿಮಿರಿಗುತ್ತು, ಯುವ ವಿಭಾಗದ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಮಹಿಳಾ ವಿಭಾಗದ ಇಂದಿರಾಕ್ಷಿ ಶೆಟ್ಟಿ, ನಳಿನಿ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಹಾಗೂ ಪುರುಷೋತ್ತಮ ಮಲ್ಲಿ, ಸತ್ಯಾನಂದ ಶೆಟ್ಟಿ ಗುರುಪುರ, ಸುದರ್ಶನ ಶೆಟ್ಟಿ ಪೆರ್ಮಂಕಿ, ಕಿರಣ್ ಪಕ್ಕಳ, ಶಿವಪ್ರಸಾದ್, ಉಮಾಶಂಕರ್ ಸುಲಾಯ, ಹರೀಶ್ ಶೆಟ್ಟಿ ಉಪ್ಪುಗೂಡು, ಸತ್ಯವಾನ್ ಆಳ್ವ ಉಪಸ್ಥಿತರಿದ್ದರು.
Next Story





