ಮಾಪಳಡ್ಕ ಮಖಾಂ ಉರೂಸ್ ಕಾರ್ಯಕ್ರಮ
ಸುಳ್ಯ, ಜ.31: ಜಾಲ್ಸೂರು-ಕಾಸರಗೋಡು ರಸ್ತೆಯ ಮಾಪಳಡ್ಕ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಸೋಮವಾರದಿಂದ ಆರಂಭಗೊಂಡಿದ್ದು, ಫೆ.2ರಂದು ದ್ಸಿಕ್ರ್ ನೇರ್ಚೆ ಮತ್ತು ನೂತನ ದರ್ಸ್ ಕಟ್ಟಡ ಉದ್ಘಾಟನೆಯು ಮಾಪಳಡ್ಕ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ.
ದರ್ಸ್ ಕಟ್ಟಡವನ್ನು ಸೈಯದ್ ಝೈನುಲ್ ಅಬಿದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆಗೈಯಲಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್, ಕಾಸರಗೋಡು ಪಂಚಾಯತ್ ಸದಸ್ಯ ಶಫೀಕ್ ರಝಾಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೂತನ ದರ್ಸ್ ಕಟ್ಟಡ ದಾನಿಗಳಾದ ಎಸ್. ಅಬ್ದುಲ್ ರಹ್ಮಾನ್ ಸಂಕೇಶ್ ಅವರನ್ನು ಸನ್ಮಾನಿಸಲಾಗುತ್ತದೆ. ಕಾಸರಗೋಡು ಮಾಲಿಕ್ ದಿನಾರ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಬಾಖವಿ ಭಾಷಣ ಮಾಡಲಿದ್ದಾರೆ.
ಫೆ.3 ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಬಾಯರ್ ತಂಙಳ್ ದುಆಗೈಯಲಿದ್ದಾರೆ. ಸಮಿತಿಯ ಅಧ್ಯಕ್ಷ ಎಬಿ ಅಶ್ರಫ್ ಸಅದಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅಬ್ದುಲ್ ಲತೀಫ್ ಸಅದಿ ಪಯ್ಯಸ್ವಿನಿ ,ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.