ದ.ಕ. ಜಿಲ್ಲೆ; ಕೋವಿಡ್‌ಗೆ 6 ಮಂದಿ ಬಲಿ: 363 ಮಂದಿಗೆ ಕೋವಿಡ್ ಸೋಂಕು
816 ಮಂದಿ ಗುಣಮುಖ

ಮಂಗಳೂರು, ಜ.31: ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ಗೆ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,757ಕ್ಕೇರಿದೆ. ಸೋಮವಾರ 363 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಅಲ್ಲದೆ 816 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಕೋವಿಡ್ ಪಾಸಿಟಿವಿಟಿ ದರ ಶೇ.5.67 ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1,32,537 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಸೋಂಕಿತರ ಪೈಕಿ ಒಟ್ಟು 1,26,826 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 3,954 ಸಕ್ರಿಯ ಪ್ರಕರಣವಿದೆ.
ಸೋಮವಾರ ಮಂಗಳೂರು ತಾಲೂಕಿನ ಸರಕಾರಿ ಶಾಲೆಯನ್ನು ಕ್ಲಷ್ಟರ್ ಎಂದು ಗುರುತಿಸಲಾಗಿದೆ. ಇಲ್ಲಿನ 30 ವಿದ್ಯಾರ್ಥಿಗಳ ಪೈಕಿ 5 ಮಂದಿಗೆ ಕೋವಿಡ್ ಸೋಂಕು ತಗಲಿದೆ. ಎಲ್ಲರೂ 12ರಿಂದ 18 ವರ್ಷ ಪ್ರಾಯದೊಳಗಿನ ವಿದ್ಯಾರ್ಥಿಗಳಾಗಿದ್ದಾರೆ.
ಸೋಮವಾರ ಮೃತಪಟ್ಟ 6 ಮಂದಿಯ ಪೈಕಿ ಮಂಗಳೂರು ತಾಲೂಕಿನ ಮತ್ತು ಹೊರಜಿಲ್ಲೆಯ ತಲಾ ಮೂವರ ಸಹಿತ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 94,679 ಪ್ರಕರಣ ದಾಖಲಿಸಿ, 1,14,48,780 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.