ಉ.ಪ್ರ. ವಿಧಾನ ಸಭೆ ಚುನಾವಣೆ: ಅಖಿಲೇಶ್ ಯಾದವ್ ವಿರುದ್ಧ ಎಸ್.ಪಿ ಸಿಂಗ್ ಬಘೇಲ್ ರನ್ನು ಕಣಕ್ಕಿಳಿಸಿದ ಬಿಜೆಪಿ

ಹೊಸದಿಲ್ಲಿ, ಜ. 31: ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರಿಗೆ ಕೇಂದ್ರ ಸಚಿವ ಎಸ್.ಪಿ. ಸಿಂಗ್ ಬಘೇಲ್ ಅವರು ಮುಖ್ಯ ಪ್ರತಿಸ್ಪರ್ಧಿಯಾಗಿರಲಿದ್ದಾರೆ. ವಿಶೇಷವೆಂದರೆ ಎಸ್.ಪಿ. ಸಿಂಗ್ ಬಘೇಲ್ ಅವರು ಈ ಹಿಂದೆ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಆಪ್ತರಾಗಿದ್ದರು.
ಆಗ್ರಾದ ಬಿಜೆಪಿ ಸಂಸದರಾಗಿರುವ ಎಸ್.ಪಿ. ಬಘೇಲ್ ಅವರು ಪಕ್ಷದ ಪೂರ್ವ ಉತ್ತರಪ್ರದೇಶದ ಕರ್ಹಾಲ್ ಕ್ಷೇತ್ರದ ಅಭ್ಯರ್ಥಿ. ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇಂದು ಬೆಳಗ್ಗೆ ಕರ್ಹಾಲ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಖಿಲೇಶ್ ಯಾದವ್, ‘‘ಕರ್ಹಾಲ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಸೋಲಲಿದ್ದಾರೆ ಎಂದು ಘೋಷಿಸಿದ್ದರು. ಈ ಹಿಂದೆ ಬಘೇಲ್ ಅವರು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಪ್ರಸ್ತುತ ಬಘೇಲ್ ಅವರು ಕೇಂದ್ರ ಕಾನೂನು ಹಾಗೂ ನ್ಯಾಯ ಖಾತೆಯ ಸಹಾಯಕ ಸಚಿವರಾಗಿದ್ದಾರೆ.
Next Story





