Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇಂದ್ರ ಬಜೆಟ್ 2022-23

ಕೇಂದ್ರ ಬಜೆಟ್ 2022-23

ವಾರ್ತಾಭಾರತಿವಾರ್ತಾಭಾರತಿ1 Feb 2022 10:57 AM IST
share
ಕೇಂದ್ರ ಬಜೆಟ್ 2022-23

ಹೊಸದಿಲ್ಲಿ: ಕೇಂದ್ರ ಸರಕಾರದ 2022-23ನೇ ಸಾಲಿನ ಬಜೆಟ್ ಮಂಡನೆ ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ ನಲ್ಲಿ ಆರಂಭವಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1 ಗಂಟೆ, 33 ನಿಮಿಷಗಳ ಕಾಲ ಬಜೆಟ್ ಮಂಡಿಸಿದರು.

*ಚಿನ್ನ ವಜ್ರಾಭರಣಗಳ ಮೇಲಿನ ಸುಂಕ ಇಳಿಕೆ

*ಕತ್ತರಿಸಿದ ಹಾಗೂ ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.5ಕ್ಕೆ ಇಳಿಕೆ

*ಆದಾಯ ತೆರಿಗೆಯಲ್ಲಿ, ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ

* ಮೊಬೈಲ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ

* ಚಪ್ಪಲಿ, ಬಟ್ಟೆ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ

*ಕೃಷಿ ಉತ್ಪನ್ನಗಳು, ವಿದೇಶಿ ಉತ್ಪನ್ನಗಳ ಮೇಲಿನ ಬೆಲೆ ಇಳಿಕೆ

*ಜನವರಿ 2022ರಲ್ಲಿ ಅತಿ ಹೆಚ್ಚು ಜಿಎಸ್ ಟಿ ಸಂಗ್ರಹ.  1 ಲಕ್ಷ, 46 ಸಾವಿರ ಕೋಟಿ ರೂ. ಜಿಎಸ್ ಟಿ  ಸಂಗ್ರಹ

*ಒಂದು  ಮಾರುಕಟ್ಟೆ, ಒಂದು ತೆರಿಗೆ ಯೋಜನೆ

*ಒಟ್ಟು ಬಜೆಟ್‌ ಗಾತ್ರ 39.54 ಲಕ್ಷ ಕೋಟಿ ರೂ.

* ತೆರಿಗೆ ಪಾವತಿ ರಿಟರ್ನ್ಸ್‌ ಸಲ್ಲಿಕೆಗೆ ಹೊಸ ನೀತಿಯ ಪರಿಚಯ, ಪಾವತಿಯಲ್ಲಿ ತಪ್ಪುಗಳಾದಲ್ಲಿ ಸರಿಪಡಿಸಲು 2 ವರ್ಷಗಳ ಅವಕಾಶ.

*ಡಿಜಿಟಲ್‌ ಕರೆನ್ಸಿ ಆಸ್ತಿಗಳ ಮೇಲೆ ಶೇ. 30ರಷ್ಟು ತೆರಿಗೆ

*ಇಂಧನ ಕ್ಷೇತ್ರದಲ್ಲಿ  ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ, 7.5 ಲಕ್ಷ ಕೋಟಿ ರೂ. ಬಂಡವಾಳ ಹೂಡಲು ನಿರ್ಧಾರ

*ಆರ್‌ಬಿಐನಿಂದಲೇ ಡಿಜಿಟಲ್‌ ಕರೆನ್ಸಿ ಆರಂಭ, ಡಿಜಿಟಲ್‌ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ

*ಈ ವರ್ಷದಲ್ಲೇ ʼಡಿಜಿಟಲ್‌ ರುಪೀʼ ಬಿಡುಗಡೆ

*50 ವರ್ಷಗಳ ಕಾಲ ರಾಜ್ಯ ಸರಕಾರಗಳಿಗೆ ಬಡ್ಡಿ ರಹಿತ ಸಾಲ ಯೋಜನೆ, ಒಂದು ಲಕ್ಷ ಕೋಟಿ ರೂ. ಸಾಲ ನೀಡಿಕೆ.

*ಎಸ್‌ಸಿ, ಎಸ್ಟಿ ವರ್ಗದ ರೈತರಿಗೆ ಆರ್ಥಿಕ ನೆರವು ಘೋಷಣೆ

*ರಕ್ಷಣಾ ಇಲಾಖೆಯಲ್ಲಿ ಶೇ. 68ರಷ್ಟು ಸ್ಥಳೀಯ ಖರೀದಿ, ಡಿಆರ್‌ಡಿಒ ಜೊತೆ ಖಾಸಗಿ ಕಂಪೆನಿಗಳು ಭಾಗಿ

*ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ 19,500 ಕೋಟಿ ರೂ. ಅನುದಾನ

*10 ವಲಯಗಳಲ್ಲಿ ಗ್ರೀನ್‌ ಎನರ್ಜಿ ಯೋಜನೆ, 2030ರ ಒಳಗಡೆ 280 ಗಿಗಾವ್ಯಾಟ್‌ ಸೋಲಾರ್‌ ವಿದ್ಯುತ್‌ ಗುರಿ

* ಆಸ್ತಿ ನೋಂದಣಿ ಇನ್ನು ಮುಂದೆ ಡಿಜಿಟಿಲೀಕರಣ.  ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ವ್ಯವಸ್ಥೆ ಜಾರಿ.

*2022-23ರಲ್ಲಿ 5ಜಿ ತರಂಗಾಂತರ ಹರಾಜು, 2022ರಲ್ಲೇ 5ಜಿ ಸೇವೆ ಲಭ್ಯ

*ಕಾಗದ ರಹಿತ ಪ್ರಕ್ರಿಯೆ ಜಾರಿಗೊಳಿಸಲು ಸರಕಾರಿ ಸೇವೆಗಳಿಗೆ ಇ-ಬಿಲ್‌ ವ್ಯವಸ್ಥೆ

*ಪ್ರತಿ ಹಳ್ಳಿಗಳಿಗೂ ಆಪ್ಟಿಕಲ್‌ ಫೈಬರ್‌ ವ್ಯವಸ್ಥೆ

*ಎಲೆಕ್ಟ್ರಿಕ್‌ ವಾಹನ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ

*1,483 ಅನವಶ್ಯಕ ಕೇಂದ್ರ ಕಾನೂನುಗಳು ರದ್ದು

*ಎಲ್ಲಾ ಪೋಸ್ಟ್‌ ಆಫೀಸ್‌ ಗಳಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ

*2023ರಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಚಿಪ್‌ ಒಳಗೊಂಡ ಇ-ಪಾಸ್‌ ಪೋರ್ಟ್‌ ಜಾರಿ

*75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ ಗಳ ಸ್ಥಾಪನೆ

*ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಪ್ರಾರಂಭ

*ಪಿಎಂ ಅವಾಸ್ ಯೋಜನೆಗೆ 48 ಸಾವಿರ ಕೋಟಿ ರೂ. ಅನುದಾನ. 2023ರೊಳಗೆ 18 ಲಕ್ಷ ಮನೆ ನಿರ್ಮಾಣದ ಗುರಿ

*ಪ್ರತಿ ಮನೆಗಳಿಗೆ ನಲ್ ಜಲ್ ಯೋಜನೆ ಘೋಷಣೆ, ಯೋಜನೆಗೆ 60 ಸಾವಿರ ಕೋಟಿ.ರೂ.ಮೀಸಲು

* ಕಾವೇರಿ-ಪೆನ್ನಾರ್‌, ಗೋದಾವರಿ-ಕೃಷ್ಣಾ ನದಿ ಜೋಡಣೆಗೆ ಸಮ್ಮತಿ

*ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಉತ್ತೇಜನ

*ಕನಿಷ್ಠ ಬೆಂಬಲ ಬೆಲೆಗೆ 2.73 ಲಕ್ಷ ಕೋಟಿ ರೂ.

*'ಡ್ರೋನ್ ಶಕ್ತಿʼ ಮೂಲಕ ಸ್ಟಾರ್ಟ್-ಅಪ್‌ ಗಳಿಗೆ ಪ್ರೋತ್ಸಾಹ

*ವಿಶ್ವದರ್ಜೆಯ ಡಿಜಿಟಲ್‌ ವಿಶ್ವವಿದ್ಯಾನಿಲಯಗಳ ಸ್ಥಾಪನೆ

*ಒನ್‌ ಕ್ಲಾಸ್ಒನ್‌ ಟಿವಿ ಚಾನೆಲ್‌ ಮೂಲಕ 1ರಿಂದ 12ನೇ ತರಗತಿವರೆಗಿನ ಹಳ್ಳಿ ಶಾಲಾ ಮಕ್ಕಳಿಗೆ ಪಾಠ ವ್ಯವಸ್ಥೆ

*3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ

*1ರಿಂದ 12ನೇ ತರಗತಿಗೆ ಒನ್ ಕ್ಲಾಸ್, ಒನ್ ಟಿವಿ ಚಾನೆಲ್

*ಕೊರೋನದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12 ತರಗತಿ ಮಕ್ಕಳಿಗೆ ಚಾನೆಲ್

*ವಿಶ್ವದರ್ಜೆಯ ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆ

*2 ಲಕ್ಷ ಅಂಗನವಾಡಿಗಳು ಮೇಲ್ದರ್ಜೆಗೆ

*ಕಾವೇರಿ,ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ

*2023ರ ಅಂತರ್ ರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ

* ಮುಂದಿನ 3 ವರ್ಷಗಳಲ್ಲಿ  400 ಹೊಸ ವಂದೇ ಮಾತರಂ ರೈಲುಗಳು

*ರಾಷ್ಟ್ರೀಯ ಹೆದ್ದಾರಿಗಳನ್ನು 25,000 ಕಿಮೀ ವಿಸ್ತರಿಸಲಾಗುವುದು

*ಮುಂದಿನ 25 ವರ್ಷದವರೆಗೆ ಸರಕಾರದ ಬ್ಲೂ ಪ್ರಿಂಟ್ ಸಿದ್ಧ. 2022ರಲ್ಲಿ ಆರ್ಥಿಕತೆ ಶೇ.9.2 ರಷ್ಟು ವೃದ್ಧಿ. 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಆಂತರಿಕವಾಗಿ 30 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ. ಬಡವರ ಕಲ್ಯಾಣಕ್ಕೆ ಸರಕಾರ ಬದ್ಧ. ಏರ್ ಇಂಡಿಯಾ ಮೇಲಿನ ಬಂಡವಾಳ ಹಿಂತೆಗೆತ ಪೂರ್ಣ: ನಿರ್ಮಲಾ ಸೀತಾರಾಮನ್

*ಕೊರೋನದಿಂದ ಆರೋಗ್ಯ ಹಾಗೂ ಆರ್ಥಿಕ ತೊಂದರೆಯಾಗಿದೆ. ನಾವು ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿದ್ದೇವೆ. 2014ರಿಂದ ಜನರ ಕಲ್ಯಾಣವೇ ನಮ್ಮ ಧ್ಯೇಯ: ನಿರ್ಮಲಾ ಸೀತಾರಾಮನ್

*ಕೇಂದ್ರ ಬಜೆಟ್ ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X