'ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ': ಬಿಜೆಪಿ

ಬೆಂಗಳೂರು: 'ಡಿ.ಕೆ.ಶಿವಕುಮಾರ್ ಅವರೇ, ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ' ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಅಸಮಾಧಾನಗೊಂಡು ಸ್ನೇಹಿತರ ಜತೆ ರೆಸಾರ್ಟ್ ಸೇರಿರುವ ಸದ್ದರಾಮಯ್ಯ ಅವರು ನಿಮ್ಮ ಬುಡಕ್ಕೆ ಬೆಂಕಿ ಇಡುವುದರಲ್ಲಿ ಅನುಮಾನವೇ ಇಲ್ಲ' ಎಂದು ಬಿಜೆಪಿ ಹೆಳಿದೆ.
''ಸಿದ್ದರಾಮಯ್ಯ ಅವರು ಜಲಕ್ರೀಡೆ, ವನವಿಹಾರದಲ್ಲಿ ಮಗ್ನರಾಗಿದ್ದರೂ ಅವರ ಪ್ರಜ್ಞೆ ಮಾತ್ರ ಕೆಪಿಸಿಸಿ ಕಚೇರಿಯ ಸುತ್ತಲೇ ಓಡಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವೇಗಕ್ಕೆ ತಡೆ ಹಾಕುವ ತಂತ್ರಗಾರಿಕೆ ಇಲ್ಲಿ ನಡೆಯುತ್ತಿರಬಹುದು'' ಎಂದು ಬಿಜೆಪಿ ಟೀಕಿಸಿದೆ.
ಡಿ.ಕೆ.ಶಿವಕುಮಾರ್ ಅವರೇ,
— BJP Karnataka (@BJP4Karnataka) February 1, 2022
ಹಸಿದ ನರಿ ಮತ್ತು ಅಸಮಾಧಾನಗೊಂಡ ಸಿದ್ದರಾಮಯ್ಯ ತೀರಾ ಅಪಾಯಕಾರಿ.
ಅಸಮಾಧಾನಗೊಂಡು ಸ್ನೇಹಿತರ ಜತೆ ರೆಸಾರ್ಟ್ ಸೇರಿರುವ @siddaramaiah ಅವರು ನಿಮ್ಮ ಬುಡಕ್ಕೆ ಬೆಂಕಿ ಇಡುವುದರಲ್ಲಿ ಅನುಮಾನವೇ ಇಲ್ಲ.#ಕಾಂಗ್ರೆಸ್‌ಕಲಹ pic.twitter.com/nN0h3Gxozm
Next Story







