ಬಜೆಟ್ 'ಜನಸ್ನೇಹಿ, ಪ್ರಗತಿಪರ', ಬಡವರ ಕಲ್ಯಾಣದತ್ತ ಚಿತ್ತ: ಪ್ರಧಾನಿ ಮೋದಿ

ಹೊಸದಿಲ್ಲಿ: ಇಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ ಎಲ್ಲರಿಗೂ ವಿಶೇಷವಾಗಿ ಬಡವರಿಗೆ ಹಾಗೂ ಸಮಾಜದ ಹಿಂದುಳಿದ ವರ್ಗದವರಿಗೆ ಪ್ರಯೋಜನವನ್ನು ನೀಡುತ್ತದೆ. ಬಜೆಟ್ ಜನಸ್ನೇಹಿ, ಪ್ರಗತಿ ಪರವಾಗಿದ್ದು, ಬಡವರ ಕಲ್ಯಾಣದತ್ತ ಪ್ರಮುಖವಾಗಿ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಬಜೆಟ್ ನಲ್ಲಿ ವಂಚಿತ ಅಥವಾ ವೇತನದಾರ ಮಧ್ಯಮ ವರ್ಗದವರಿಗೆ ಏನೂ ಇಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ತಿರುಗೇಟು ನೀಡಿದರು.
"ಈ ಬಜೆಟ್ ಆರ್ಥಿಕತೆಯು ಸದೃಢವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತಕ್ಷಣದ ಅಗತ್ಯಗಳನ್ನು ತಿಳಿಸುತ್ತದೆ... ಇದು ಹೆಚ್ಚಿನ ಹೂಡಿಕೆ, ಹೆಚ್ಚಿನ ಮೂಲಸೌಕರ್ಯ, ಹೆಚ್ಚಿನ ಬೆಳವಣಿಗೆಯನ್ನು ಖಚಿತಪಡಿಸುತ್ತದೆ" ಎಂದು ಪ್ರಧಾನಿ ಹೇಳಿದರು.
ರಸ್ತೆಗಳು, ಹೆದ್ದಾರಿಗಳು, ರೈಲ್ವೆಗಳು - ಈ ಬಜೆಟ್ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
Next Story





