ಹೆಬ್ರಿ: ವಾಲಿಬಾಲ್ ಆಟಗಾರ ಆತ್ಮಹತ್ಯೆ

ಹೆಬ್ರಿ, ಫೆ.1: ಪ್ರತಿಭಾವಂತ ವಾಲಿಬಾಲ್ ಆಟಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹೆಬ್ರಿ ಕೆಳಪೇಟೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಕೆಳಪೇಟೆಯ ನಿವಾಸಿ ಪ್ರಶಾಂತ್ ಯಾನೆ ಪಚ್ಚು (30) ಎಂದು ಗುರುತಿಸಲಾಗಿದೆ.
ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದ ಇವರು, ಉತ್ತಮ ವಾಲಿಬಾಲ್ ಆಟಗಾರ ಆಗಿ, ಹೆಬ್ರಿ ಎಪಿಟಿ ಹಾಗೂ ಎರ್ಲಪಾಡಿ ವಾಲಿಬಾಲ್ ತಂಡದಲ್ಲಿ ಆಡುತ್ತಿದ್ದರು.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಾನಸಿಕವಾಗಿ ನೊಂದು ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story