ಕಳಪೆ ಆರ್ಥಿಕ ನೀತಿ ಮುಂದುವರಿಕೆ: ವೆಲ್ಫೇರ್ ಪಾರ್ಟಿ ಆರೋಪ
ಉಡುಪಿ, ಫೆ.1: ಕೇಂದ್ರ ಸರಕಾರ ಮಂಡಿಸಿರುವ 2022ರ ಈ ಬಜೆಟ್ ನಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ಯಾವುದೇ ರೀತಿಯ ಕಾಳಜಿ ತೋರಲಾಗಿಲ್ಲ. ಆರೋಗ್ಯ ಕ್ಷೇತ್ರಕ್ಕೆ ಯಾವುದೇ ರೀತಿಯ ಮಹತ್ವ ನೀಡ ಲಾಗಿಲ್ಲ ಹಾಗೂ ಸಣ್ಣ ಪುಟ್ಟ ಉದ್ದಿಮೆದಾರರು ಈವರೆಗೂ ಜಿಎಸ್ಟಿಯಂತಹ ತೆರಿಗೆ ಪದ್ಧತಿ ಜೊತೆಗೆ ಹೆಣಗಾಡುತ್ತಿರುವುದನ್ನು ತಪ್ಪಿಸಲು ಸರಕಾರಕ್ಕಿನ್ನೂ ಸಾಧ್ಯವಾಗಿಲ್ಲ. ಈ ಬಜೆಟ್ನಲ್ಲಿಯೂ ಹಿಂದಿನ ವರ್ಷದಂತೆ ರೈತರನ್ನು ತೀರಾ ಕಡೆಗಣಿಸಲಾಗಿದೆ. ತನ್ನ ಈ ಹಿಂದಿನ ಕಳಪೆ ಆರ್ಥಿಕ ನೀತಿಯನ್ನೇ ಕೇಂದ್ರ ಸರಕಾರ ಮುಂದುವರಿಸಿಕೊಂಡು ಹೋಗುತ್ತಿರುವುದು ಸಹ್ಯವಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ತಿಳಿಸಿದ್ದಾರೆ.
Next Story