ಮುನಿಯಾಲು ಆಯುರ್ವೇದ ಕಾಲೇಜಿಗೆ 19 ರ್ಯಾಂಕ್‌ಗಳು
ಮಣಿಪಾಲ, ಫೆ.1: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಬೆಂಗಳೂರು ಇದರ ಬಿ.ಎ.ಎಂ.ಎಸ್. ವಾರ್ಷಿಕ ಪರೀಕ್ಷೆಯಲ್ಲಿ ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿದ್ದು, ಆಯುರ್ವೇದದ ವೈಜ್ಞಾನಿಕತೆಯನ್ನು ದೃಢಪಡಿಸಲು ಅತೀ ಅಗತ್ಯವಾದ ರೀಸರ್ಚ್ ಮೆಥಡಾಲಜಿ (ಅನುಸಂಧಾನ/ಸಂಶೋಧನಾ ಪದ್ಧತಿ) ವಿಷಯದಲ್ಲಿ ಕಾಲೇಜಿನ ಅಂತಿಮ ವರ್ಷದ 19 ವಿದ್ಯಾರ್ಥಿಗಳು ರ್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕಾಲೇಜಿನ ದಿವ್ಯಾ ನಾರಾಯಣ್ ನಾಲ್ಕನೇ ರ್ಯಾಂಕ್, ದಲಾಲ್ ಡಿಂಪಲ್, ಪ್ರಿನ್ಸಿಟ ವಿಲ್ಸನ್ ರಾಡ್ರಿಗಸ್ ಐದನೇರ್ಯಾಂಕ್, ಸೃಷ್ಟಿ ಎಸ್ ಶೆಟ್ಟಿ ಆರನೇ ರ್ಯಾಂಕ್, ಅಬ್ರಹಾಂ ಪಿ ಚೆರಿಯನ್, ಲಹರಿ ಎಲ್, ಪ್ರಶಾಂತಿ ಪಿ ಪಿ ಏಳನೇ ರ್ಯಾಂಕ್, ಚೈತ್ರ ಸಿ ಶೆಟ್ಟಿ, ಶ್ರೀನಿಧಿ ಎಂಟನೇ ರ್ಯಾಂಕ್, ಆದಿತ್ಯ ತಿವಾರಿ, ಅರುಣಿಮಾ ರಾಜ್ ಇ ಕೆ, ಬಿನ್ಸಿ ಎಸ್, ಬ್ಲಿಸ್‌ಕಾರ್ಕಿಲ್ಲಿಯಾಂಗ್, ಗಂಗಾ ಪ್ರಸಾದ ಪೆರಿಕಾಮನ, ಗೋಪಿಕಾ ರಾಜೀವನ್, ಹೈಬಿ ಥಾಮಸ್ ಒಂಬತ್ತನೇ ರ್ಯಾಂಕ್, ಅಹಲ್ಯಾ ಯು ಕೆ, ಕೆ.ಶೃತಿ ಮುರಳಿ, ನಿಶ್ಮಿತಾ ಜೆ ಪಿ ಹತ್ತನೇ ರ್ಯಾಂಕ್ ಪಡೆದಿದ್ದಾರೆ.