ಪಿಂಚಣಿದಾರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಧರಣಿ
ಕುಂದಾಪುರ, ಫೆ.1: ಪಿಂಚಣಿದಾರರ ಸಮಸ್ಯೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಕುಂದಾಪುರ ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಪಿಂಚಣಿದಾರರು ಅರ್ಜಿ ಸಲ್ಲಿಸಿದ 15 ದಿನದಲ್ಲಿ ಪರಿಶೀಲನೆ ನಡೆಸಿ ಅದೇ ತಿಂಗಳಿಂದ ಪಿಂಚಣಿ ಖಾತೆಗೆ ಜಮೆ ಮಾಡಬೇಕು. ಜೀವಿತ ಪ್ರಮಾಣ ಪತ್ರ ಕಾರ್ಮಿಕ ನಿರೀಕ್ಷಕರು ನೀಡಬೇಕು. ವಿವಿಧ ಯೇಜನೆಯಲ್ಲಿ ಪಿಂಚಣಿ ಪಡೆಯು ತ್ತಿಲ್ಲ ಎಂಬ ಧೃಡೀಕರಣವನ್ನು ಗ್ರಾಮಕರಣಿರು ನೀಡುವ ಕೈ ಬರಹದ ಧೃಡೀಕರಣ ಸ್ವೀಕರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಹಿಂದೆ ಬ್ಯಾಂಕ್ಗಳ ವಿಲೀನದಿಂದ ಐಎಫ್‌ಎಸ್‌ಸಿ ಬದಲಾವಣೆ, ಪರೀಶೀಲನೆ ವಿಳಂಬ, ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕೆಲವು ತಿಂಗಳು ಬಾಕಿ ಇರುವ ಪಿಂಚಣಿದಾರರಿಗೆ ಬಾಕಿ ಹಣ ಜಮೆ ಮಾಡಬೇಕು. ಪಿಂಚಣಿ ಅರ್ಜಿ ಶೀಘ್ರ ವಿಲೇವಾರಿಗಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಸಿಬ್ಬಂದಿ ನೇಮಕ ಮಾಡಬೇಕು. ಪಿಂಚಣಿ 5ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಮನವಿ ಆಗ್ರಹಿಸಲಾಗಿದೆ.
ವಿಧವ ವೇತನ ಪಡೆಯುವ ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಎರಡೂ ಪಿಂಚಣಿ ಪಡೆಯಲು ಅವಕಾಶ ಕೊಡಬೇಕು. ಪಿಂಚಣಿದಾರರು 60 ವರ್ಷದ ನಂತರ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ವಂತಿಗೆ ಬಾಕಿ ಇದ್ದರೆ ಚಲನ್ ಮೂಲಕ ಸಲ್ಲಿಸಿದ ವಂತಿಗೆ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡಬೇಕು. ಬಾಕಿ ಇರುವ ಕರೋನ ಪರಿಹಾರ ರೂ.5000ರೂ. ಹಾಗೂ 3000ರೂ. ಖಾತೆಗೆ ಜಮಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಧರಣಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಯು.ದಾಸಭಂಡಾರಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮೊದಲಾದವರು ಉಪಸ್ಥಿತರಿದ್ದು.