ಕುಂದಾಪುರ ತಾಲೂಕು ಸಿಐಟಿಯು ಸಮಾವೇಶ
ಕುಂದಾಪುರ, ಫೆ.1: ದೇಶದ ಸಂಪತ್ತು ಮಾರಾಟ, ಕಾರ್ಮಿಕ ಕಾನೂನುಗಳನ್ನು ದೇಶದ ಬಂಡವಾಳಗಾರರ ಪರವಾಗಿ ತಿದ್ದುಪಡಿ ಮಾಡುತ್ತಿರುವುದು, ಬೆಲೆ ಏರಿಕೆಯನ್ನು ದುಡಿಯುವ ವರ್ಗದ ಮೇಲೆ ಹೇರುತ್ತಿರುವ ಕೇಂದ್ರ ಸರಕಾರದ ನೀತಿಯ ವಿರುದ್ಧ ಮಾ.28-29ರಂದು ಎರಡು ದಿನಗಳ ಅಖಿಲ ಭಾರತ ಮುಷ್ಕರ ಸಿಐಟಿಯು ನೇತೃತ್ವದಲ್ಲಿ ಯಶಸ್ವಿಗೊಳಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಕರೆ ನೀಡಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ನಡೆದ ಸಿಐಟಿಯು ಕುಂದಾಪುರ ತಾಲೂಕು ಸಂಚಲನ ಸಮಿತಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.ಸಮಾವೇಶದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಚಾಲಕ ಎಚ್.ನರಸಿಂಹ ವಹಿಸಿದ್ದರು. ಹಂಚು, ಬೀಡಿ, ರಿಕ್ಷಾ, ಅಂಗನವಾಡಿ, ಅಕ್ಷರದಾಸೋಹ ನೌಕರರು ಭಾಗವಹಿಸಿದ್ದರು.
Next Story