ಹೊಸದುರ್ಗ: ಎಸಿಬಿ ಬಲೆಗೆ ಬಿದ್ದ ಲಕ್ಕಿಹಳ್ಳಿ ಪ್ರಭಾರ ಗ್ರಾಮಲೆಕ್ಕಾಧಿಕಾರಿ

ಹೊಸದುರ್ಗ, ಫೆ.1: ತಾಲೂಕಿನ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ ಪ್ರಭಾರ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಬಣಕಾರ್ ಮಂಗಳವಾರ ಲಂಚ ಸ್ವೀಕರಿಸುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅವರು ಒಂದೂವರೆ ವರ್ಷದಿಂದ ಪ್ರಭಾರ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈತನು ಹಲವು ಬಾರಿ ಸಾರ್ವಜನಿಕರಿಂದ ಲಂಚ ಸ್ವೀಕರಿಸಿದ್ದರಿಂದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕುರಿತು ಸ್ಥಳೀಯರು ಎಸಿಬಿಗೆ ದೂರು ನೀಡಿದ್ದರು.
ಮಂಗಳವಾರ ಲಕ್ಕಿಹಳ್ಳಿ ಗ್ರಾಮದ ವಿಜಯ್ ಎಂಬುವವರಿಂದ ಖಾತೆ ಬದಲಾವಣೆ ಮಾಡಲು 5,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಕಚೇರಿಗೆ ಬಂದ ಎಸಿಬಿ ಡಿವೈಎಸ್‍ಪಿ ಮಂಜುನಾಥ್ ಹಾಗೂ ಅವರ ತಂಡದವರು ಆರೋಪಿಯನ್ನು ಬಂಧಿಸಿದ್ದಾರೆ.
Next Story





