ಉಡುಪಿ: ಪಾರ್ಸೆಲ್ ಸಮೇತ ಡೆಲಿವೆರಿ ಬಾಯ್ಯ ಸ್ಕೂಟರ್ ಕಳವು

ಸಾಂದರ್ಭಿಕ ಚಿತ್ರ
ಉಡುಪಿ, ಫೆ.1: ಹೋಮ್ ಡೆಲಿವೆರಿ ಮಾಡುವ ಸ್ಕೂಟರ್ನ್ನು ಸಾವಿರಾರು ರೂ. ಮೌಲ್ಯದ ಪಾರ್ಸೆಲ್ ಸಮೇತ ಕಳವು ಮಾಡಿರುವ ಘಟನೆ ಜ.31ರಂದು ಬೆಳಗ್ಗೆ ಉಡುಪಿ ವಿದ್ಯೋದಯ ಹೈಸ್ಕೂಲ್ ಬಳಿಯ ಸಾಯಿರಾಧಾ ಗೋಕುಲ ಧಾಮ ಅಪಾರ್ಟ್ಮೆಂಟ್ ಎದುರುಗಡೆ ನಡೆದಿದೆ.
ಕೊಳಲಗಿರಿ ಲಕ್ಷ್ಮೀನಗರದ ಗಣೇಶ ಅಂಬಲಪಾಡಿಯ ಇ-ಕಾರ್ಟ್ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ಹೋಮ್ ಡೆಲಿವರಿಗೆ ಸ್ಕೂಟರ್ ನಿಲ್ಲಿಸಿ ಪಾರ್ಸೆಲ್ ಕೊಟ್ಟು ಬರುವಾಗ ಸ್ಕೂಟರ್ ಕಳವಾಗಿರುವುದು ಕಂಡುಬಂದಿದೆ. 80 ಸಾವಿರ ರೂ. ಮೌಲ್ಯದ ಸ್ಕೂಟರ್, ಅದರಲ್ಲಿದ್ದ ಮೊಬೈಲ್, ಮಿಕ್ಸರ್ ಗ್ರೈಂಡರ್ ಸಹಿತ 20 ಸಾವಿರ ರೂ. ಮೌಲ್ಯದ ಪಾರ್ಸೆಲ್ ಕಳವು ಆಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





