ಮಂಗಳೂರು: ಕಾಲೇಜು ಬಳಿ ತಲವಾರು ಹಿಡಿದು ದಾಂಧಲೆ

ಮಂಗಳೂರು, ಫೆ.1: ನಗರದ ಬಲ್ಲಾಳ್ ಬಾಗ್ ಸಮೀಪದ ಕಾಲೇಜೊಂದರ ಬಳಿ ಮಂಗಳವಾರ ಸಂಜೆ ತಂಡವೊಂದು ತಲವಾರು ಹಿಡಿದು ದಾಂಧಲೆ ನಡೆಸಿದೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದೆ.
ವಾಹನಗಳ ಮಧ್ಯೆ ಢಿಕ್ಕಿಯಾದ ಬಗ್ಗೆ ವಿದ್ಯಾರ್ಥಿಗಳ ನಡುವೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಕೆಲವು ಸಮಯದ ಬಳಿಕ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿ ಆಗಮಿಸಿ ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬರ್ಕೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Next Story