ಫೆ. 2-3: ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು, ಫೆ.1: ನಗರದ ಕುದ್ರೋಳಿ ಉಪಕೇಂದ್ರದಿಂದ ಹೊರಡುವ ದುರ್ಗಮಹಲ್ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿದೆ. ಹಾಗಾಗಿ ಫೆ.2ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಣ್ಣಗುಡ್ಡ, ಹರಿದಾಸ್ ಲೇನ್, ಕಾಂತರಾಜ ಶೆಟ್ಟಿ ಲೇನ್, ಅಳಕೆ, ಅಳಕೆ ಮಾರ್ಕೆಟ್, ವಾದಿರಾಜ ನಗರ, ಬೊಕ್ಕಪಟ್ನ, ಚರ್ಚಗೇಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ ಕೋಟೆಕಾರ್, ಉಳ್ಳಾಲ, ಮೇಲಂಗಡಿ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವ ಕಾರಣ ಫೆ.2ರ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಚೆಂಬುಗುಡ್ಡೆ, ಕಾಪಿಕಾಡ್, ಅಂಬಿಕಾರಸ್ತೆ, ಕೋಟೆಕಾರ್, ಬೀರಿ, ಮಾಸ್ತಿಕಟ್ಟೆ, ಮೇಲಂಗಡಿ, ಅಬ್ಬಕ್ಕ ಸರ್ಕಲ್, ಹೈದರಾಲಿನಗರ, ದರ್ಗಾ, ಕೋಟೆಪುರ, ಮಿಲ್ಲತ್ ನಗರ, ಮಂಚಿಲ, ಅಳೇಕಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಅತ್ತಾವರ ಉಪಕೇಂದ್ರದಿಂದ ಹೊರಡುವ ಮುನೀಶ್ವರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವ ಕಾರಣ ಫೆ.3ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪೊಲೀಸ್ ಲೇನ್, ಪಿಡಬ್ಲುಡಿ, ಕರ್ಮಯಲ್ ಟ್ಯಾಕ್ಸ್ ಆಫೀಸ್, ಕೇರಳ ಸಮಾಜ ರಸ್ತೆ, ಎಂ.ವಿ. ಶೆಟ್ಟಿ, ಓಲ್ಡ್‌ಕೆಂಟ್ ರಸ್ತೆ, ದೂಮಪ್ಪಕಾಂಪೌಂಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.