ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವ ಅಂಶವೂ ಇಲ್ಲ : ಯು.ಟಿ.ಖಾದರ್

ಕೇಂದ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವ ಅಂಶವೂ ಇಲ್ಲ. ಬದಲಾಗಿ ಈ ಬಜೆಟ್ ಶ್ರೀಮಂತರ ಅನುಕೂಲಕ್ಕಾಗಿ ಮಂಡಿಸಿದಂತಿದೆ. ಕೇವಲ ಕಾರ್ಪೋರೇಟ್ ತೆರಿಗೆಯನ್ನು ಮಾತ್ರ ಕಡಿಮೆ ಮಾಡಿ, ಜನಸಾಮಾನ್ಯನಿಗೆ ಬೇಕಾದ ಯಾವುದೇ ಯೋಜನೆಗಳನ್ನು ಬಿಡುಗಡೆ ಮಾಡದೆ, ಕೋವಿಡ್‌ಗಿರಲಿ, ಬೆಳೆ ಹಾನಿಗೀಡಾದ ರೈತರಿಗೆ, ದೇಶದ ರಕ್ಷಣೆಯ ಇಲಾಖೆಗೆ ಯಾವುದೇ ಮಹತ್ವದ ಯೋಜನೆಗಳನ್ನು ಪ್ರಕಟಿಸಿಲ್ಲ. ವರ್ಚುವಲ್, ಡಿಜಿಟಲ್ ಕರೆನ್ಸಿಯನ್ನು ಕಾನೂನುಬದ್ಧಗೊಳಿಸುವ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿಸಲು ಪೂರಕವಾದಂತಿದೆ. ದೇಶದ ಎಪತ್ತೈದು ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಳಪೆ ಬಜೆಟ್ ಆಗಿದೆ.
ಯು.ಟಿ.ಖಾದರ್
ಉಪನಾಯಕರು, ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷ
Next Story