ಎಸ್‌ವೈಎಸ್ ತೊಕ್ಕೊಟ್ಟು ವತಿಯಿಂದ ಕುಟುಂಬ ನಿರ್ವಹಣೆಗೆ ಚೆಕ್ ವಿತರಣೆ

ಉಳ್ಳಾಲ: ಎಸ್‌ವೈಎಸ್ ತೊಕ್ಕೊಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬದ ನಿರ್ವಹಣೆಗೆ ಚೆಕ್ ವಿತರಣಾ ಕಾರ್ಯಕ್ರಮ ತೊಕ್ಕೊಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್‌ನಲ್ಲಿ ಇತ್ತೀಚೆಗೆ ನಡೆಯಿತು.
ಬ್ರಾಂಚ್ ಎಸ್‌ವೈಎಸ್ ಅಧ್ಯಕ್ಷ ಆರೀಫ್ ಪಿಲಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿ.ಎಸ್. ಇಸ್ಮಾಯಿಲ್ ಉದ್ಘಾಟಿಸಿದರು. ಯೂನುಸ್ ಇಮ್ದಾದಿ ತೋಟ ಪ್ರಸ್ತಾವನೆಗೈದರು. ಸಿನಾನ್ ಹುಸೈನ್ ಬೆಂಗರೆ ಚೆಕ್ ವಿತರಿಸಿದರು.
ಅಬ್ದುಲ್ ಸಮದ್ ಮದನಿ ನಗರ, ಯೂಸುಫ್ ಹನೀಫಿ ಮುಕ್ಕಚ್ಚೇರಿ, ಆಸಿಫ್ ಎಮ್ ಎಫ್ ಸಿ ಮುಕಚೇರಿ, ಶಮೀರ್ ಪಿಲಾರ್, ಮನ್ಸೂರ್ ಮುಂಡೋಳಿ, ಖಾದರ್ ದಾರಂದಬಾಗಿಲು, ಲತೀಫ್ ಪಿಲಾರ್ ಉಪಸ್ಥಿತರಿದ್ದರು.
ಅಲ್ತಾಫ್ ಕುಂಪಲ ಸ್ವಾಗತಿಸಿ, ವಂದಿಸಿದರು.
Next Story