ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕರಿಗೆ 'ಎಫ್ಐಟಿಯು' ವತಿಯಿಂದ ಸನ್ಮಾನ

ವಿಟ್ಲ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಕೃಷಿಕ ಮಹಾಲಿಂಗ ನಾಯ್ಕ ಅವರ ಮನೆಗೆ ತೆರಳಿದ ಕಾರ್ಮಿಕ ಸಂಘಟನೆಯಾಗಿರುವ ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಎಫ್ಐಟಿಯು) ಇದರ ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ನೇತೃತ್ವದ ನಿಯೋಗವು ಅವರನ್ನು ಗೌರವಿಸಿ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ವಿಟ್ಲ ಘಟಕದ ಕಾರ್ಯದರ್ಶಿ ಅಬ್ದುಲ್ಲ ಕುಂಞಿ, ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಎ. ಕೆ. ಕುಕ್ಕಾಜೆ ಮತ್ತು ವೆಲ್ಫೇರ್ ಪಕ್ಷದ ಪುತ್ತೂರು ವಲಯ ಕಾರ್ಯದರ್ಶಿ ಇಸ್ಹಾಕ್ ನೀರ್ಕಜೆ ನಿಯೋಗದಲ್ಲಿ ಉಪಸ್ಥಿತರಿದ್ದರು.






.jpeg)

.jpeg)

