ಪಠ್ಯದಲ್ಲಿ ಮಲಯಾಳಂ ನಟ ಕುಂಚಾಕೋ ಬಾಬನ್ ಫೋಟೋ: ಕರ್ನಾಟಕ ಪಠ್ಯಪುಸ್ತಕ ಸಂಘ ಸ್ಪಷ್ಟನೆ

ಬೆಂಗಳೂರು, ಫೆ.1: ದಿನಪತ್ರಿಕೆಗಳಲ್ಲಿ ಪಠ್ಯದಲ್ಲಿ ಅಂಚೆಯಣ್ಣನ ಚಿತ್ರಕ್ಕೆ ಮಲಯಾಳಂ ಚಿತ್ರ ನಟನ ಫೋಟೋ ಶೀರ್ಷಿಕೆಯಡಿಯಲ್ಲಿ ಕುಂಚಾಕೋ ಬಾಬನ್‍ರ ಚಿತ್ರವನ್ನು ಶಾಲಾ ಪಠ್ಯದಲ್ಲಿ ಹಾಕಲಾಗಿದೆ ಎಂದೂ, ಶಿಕ್ಷಣ ಸಮಿತಿಯು ಪಠ್ಯಪುಸ್ತಕಗಳಲ್ಲಿ ಚಿತ್ರಗಳನ್ನು ಯಾವುದೇ ಸಂಶೋಧನೆ ಮಾಡದೆ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಸವಾಲ್ ಹಾಕಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಮಲಯಾಳಂ ನಟ ಕುಂಚಾಕೋ ಬಾಬನ್ ಚಿತ್ರ : ಡಿ.ಕೆ. ಸುರೇಶ್ ಟ್ವೀಟ್ ಗೆ ಸುರೇಶ್ ಕುಮಾರ್ ತಿರುಗೇಟು
ಈ ವರದಿಗಳನ್ನು ಪರಿಶೀಲಿಸಿ, ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಚಿತ್ರವನ್ನು ಕರ್ನಾಟಕದ 1 ರಿಂದ 10ನೇ ತರಗತಿವರೆಗಿನ ಯಾವುದೇ ತರಗತಿಯ ಯಾವುದೇ ವಿಷಯದ ಪಠ್ಯಪುಸ್ತಕಗಳಲ್ಲಿ ಮುದ್ರಿಸಿಲ್ಲ. ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಮುದ್ರಿತವಾಗಿರುವ ಯಾವುದೇ ಪಠ್ಯಪುಸ್ತಕದಲ್ಲಿಯೂ ಸದರಿ ಚಿತ್ರ ಮುದ್ರಿತವಾಗಿರುವುದಿಲ್ಲ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
Next Story





