Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಿ. ಎಂ. ಇಬ್ರಾಹೀಮರ ಸಾಲಕ್ಕೆ ಕಂತು...

ಸಿ. ಎಂ. ಇಬ್ರಾಹೀಮರ ಸಾಲಕ್ಕೆ ಕಂತು ಕಟ್ಟುತ್ತಿರುವ ರಾಜ್ಯದ ಮುಸ್ಲಿಮರು

ವಾರ್ತಾಭಾರತಿವಾರ್ತಾಭಾರತಿ2 Feb 2022 12:05 AM IST
share
ಸಿ. ಎಂ. ಇಬ್ರಾಹೀಮರ ಸಾಲಕ್ಕೆ ಕಂತು ಕಟ್ಟುತ್ತಿರುವ ರಾಜ್ಯದ ಮುಸ್ಲಿಮರು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

‘ವಿಧಾನ ಪರಿಷತ್‌ನ ವಿಪಕ್ಷ ನಾಯಕ ಹುದ್ದೆಯಿಂದ ಒಬ್ಬ ರಾಜಕೀಯ ನಾಯಕನ 40 ಕೋಟಿ ರೂಪಾಯಿ ಸಾಲ ತೀರಬಹುದಾದರೆ, ಆಡಳಿತ ಪಕ್ಷದಲ್ಲಿರುವ ನಾಯಕ ಗಳಿಸಬಹುದಾದ ಕೋಟಿಗಳೆಷ್ಟಿರಬಹುದು?’ ಎನ್ನುವ ಪ್ರಶ್ನೆಯನ್ನು ಹತ್ತನೇ ತರಗತಿಯ ಗಣಿತ ಪುಸ್ತಕದಲ್ಲಿ ಸೇರಿಸುವುದಕ್ಕೆ ಅಡ್ಡಿಯಿಲ್ಲ. ತನ್ನ ಅಲ್ಪಸಂಖ್ಯಾತ ಕ್ರೆಡಿಟ್ ಕಾರ್ಡ್‌ನ್ನು ಬಳಸಿ, ಸಮಯ, ಸಂದರ್ಭಕ್ಕನುಗುಣವಾಗಿ ಪಕ್ಷಗಳನ್ನು ಬದಲಿಸಿಕೊಂಡು ಉನ್ನತ ಸ್ಥಾನಗಳನ್ನು ಮೇಯುತ್ತಾ ಬಂದಿರುವ ಸಿ. ಎಂ. ಇಬ್ರಾಹೀಮ್ ಎನ್ನುವ ನಾಯಕ, ಇತ್ತೀಚೆಗೆ ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಮೂಲಕ ನಾಟಕದಲ್ಲಿ ನನಗೆ ದೇವೇಗೌಡರೂ ಸಾಟಿಯಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅವರೇನೂ ಈ ದೇಶದ ಮುಸ್ಲಿಮ್ ಸಮುದಾಯದ ಸ್ಥಿತಿಗತಿಯನ್ನು ಕಂಡು ಕಣ್ಣೀರಿಟ್ಟಿದ್ದಲ್ಲ. ಅವರು ಕಣ್ಣೀರಿಟ್ಟಿರುವುದು ತನಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ಕಾಂಗ್ರೆಸ್ ನೀಡಿಲ್ಲ ಎನ್ನುವ ಕಾರಣಕ್ಕಾಗಿ. ‘‘ಇಷ್ಟು ಸಮಯ ರಾಜಕೀಯದಲ್ಲಿದ್ದರೂ ನನಗೆ 40 ಕೋಟಿ ರೂಪಾಯಿ ಸಾಲ ಇದೆ. ಮದುವೆಯಾಗುವ ಐವರು ಮಕ್ಕಳಿದ್ದಾರೆ’’ ಎಂದು ಈ ಸಂದರ್ಭದಲ್ಲಿ ತನ್ನ ಕಷ್ಟವನ್ನು ಅವರು ತೋಡಿಕೊಂಡಿದ್ದಾರೆ.

ನಮ್ಮ ಮುಂದೆ ಎದುರಾಗುವ ಮೊದಲ ಪ್ರಶ್ನೆ, ಇವರಿಗೆ 40 ಕೋಟಿ ರೂಪಾಯಿ ಸಾಲ ಇರುವುದಕ್ಕೂ, ವಿಧಾನಪರಿಷತ್ ವಿಪಕ್ಷ ನಾಯಕ ಹುದ್ದೆ ನೀಡುವುದಕ್ಕೂ ಏನು ಸಂಬಂಧ? ಒಂದು ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಹುದ್ದೆಯನ್ನು ನೀಡಿದರೆ, ಅವರ 40 ಕೋಟಿ ರೂಪಾಯಿ ಸಾಲ ತೀರುತ್ತದೆಯೇ? ಅದು ಅಷ್ಟೊಂದು ಲಾಭದಾಯಕ ಹುದ್ದೆಯೇ? ಅವರ ಐವರ ಮಕ್ಕಳ ಮದುವೆಗಾಗಿ, ವಿಪಕ್ಷ ನಾಯಕನಂತಹ ಮಹತ್ವದ ಸ್ಥಾನವನ್ನು ಕಾಂಗ್ರೆಸ್ ಪಕ್ಷ ನೀಡಬೇಕು ಎಂದು ಸಿ. ಎಂ. ಇಬ್ರಾಹೀಮ್‌ರಂತಹ ಹಿರಿಯ ನಾಯಕರು ಬಯಸುವುದು ಸಣ್ಣತನವಲ್ಲವೇ? ಅಲ್ಪಸಂಖ್ಯಾತರನ್ನು ಮುಂದಿಟ್ಟು ರಾಜಕೀಯದಲ್ಲಿ ಮೇಲೆ ಬಂದ ಇಬ್ರಾಹೀಮ್ ಸಾಹೇಬರು, ತನ್ನ ಸಮುದಾಯದ ಶೋಚನೀಯ ಸ್ಥಿತಿಗಾಗಿ ಯಾವತ್ತಾದರೂ ಸಾರ್ವಜನಿಕವಾಗಿ ಕಣ್ಣೀರಿಟ್ಟ ಉದಾಹರಣೆಯಿದೆಯೆ? 40 ಕೋಟಿ ರೂಪಾಯಿ ಸಾಲ ಇದೆ ಎನ್ನುತ್ತಿದ್ದಾರೆ ಇಬ್ರಾಹೀಮ್ ಅವರು. ಈ 40 ಕೋಟಿ ರೂಪಾಯಿ ಸಾಲವನ್ನು ಯಾರಿಗಾಗಿ ಮಾಡಿದರು? ತಮ್ಮ ಸಮುದಾಯದ ಜನರಿಗಾಗಿ ಈ ಸಾಲವನ್ನು ಮಾಡಿದರೆ? ಅಥವಾ ಕಾಂಗ್ರೆಸ್ ಪಕ್ಷಕ್ಕಾಗಿ ಸಾಲ ಮಾಡಿದರೆ ಅಥವಾ ಇವರ ವಿಧಾನಪರಿಷತ್ ಸ್ಥಾನವನ್ನು 40 ಕೋಟಿ ರೂಪಾಯಿ ನೀಡಿ ಕಾಂಗ್ರೆಸ್ ಪಕ್ಷದಿಂದ ಖರೀದಿಸಿದೆ ಎಂದು ಹೇಳುತ್ತಿದ್ದಾರೆಯೇ? ಎಲ್ಲಕ್ಕಿಂತ ಮುಖ್ಯವಾಗಿ, ರಾಜಕೀಯಕ್ಕೆ ಕಾಲಿಡುವಾಗ ಸಿ.ಎಂ. ಇಬ್ರಾಹೀಮ್ ಅವರಲ್ಲಿದ್ದ ಹಣ, ಆಸ್ತಿಯೆಷ್ಟು? ಮತ್ತು ಇದೀಗ ರಾಜಕೀಯದ ಮುಸ್ಸಂಜೆಯಲ್ಲಿರುವಾಗ ಅವರು ಹೊಂದಿರುವ ಆಸ್ತಿ, ಹಣವೆಷ್ಟು? ಎನ್ನುವ ಲೆಕ್ಕವನ್ನು ರಾಜ್ಯಕ್ಕೆ ಬಿಡಿ, ಕನಿಷ್ಠ ಅವರನ್ನು ನಂಬಿದ್ದ ಈ ರಾಜ್ಯದ ಮುಸ್ಲಿಮ್ ಸಮುದಾಯಕ್ಕಾದರೂ ನೀಡಬಲ್ಲರೆ? ಹಾಗೆ ನೀಡಿದರೆ ಅವರ ಕಣ್ಣೀರನ್ನು ನಾವು ನಂಬಬಹುದಾಗಿತ್ತು. ಸಿ.ಎಂ. ಇಬ್ರಾಹೀಮ್ ಸೇರಿದಂತೆ ಹಲವು ಅಲ್ಪಸಂಖ್ಯಾತ ನಾಯಕರು ಅತ್ಯುನ್ನತ ಸ್ಥಾನವನ್ನು ಏರಿ, ಅಧಿಕಾರ ಅನುಭವಿಸಿದ್ದಾರೆ. ಇವರೆಲ್ಲ ಕನಿಷ್ಠ ತನ್ನ ಸಮುದಾಯದ ದೀನ ಸ್ಥಿತಿಯನ್ನು ಕಂಡು ಅಲ್ಲಿ ಸುಧಾರಣೆಗಳಿಗೆ ಪ್ರಯತ್ನ ಮಾಡಿದ್ದಿದ್ದರೆ ಈ ರಾಜ್ಯದ ಮುಸ್ಲಿಮರ ಸ್ಥಿತಿ ಇಂದು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ. ಮುಸ್ಲಿಮರನ್ನು ತಮ್ಮ ರಾಜಕೀಯಕ್ಕೆ ಬಳಸುವಲ್ಲಿ ಇವರು ಯಶಸ್ವಿಯಾದರೇ ಹೊರತು, ತಮ್ಮನ್ನು ನಂಬಿದ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತರಲು ಯಾವತ್ತೂ ಶ್ರಮಿಸಲೇ ಇಲ್ಲ. ಇಂದು ಅಧಿಕಾರ ತಪ್ಪಿದಾಕ್ಷಣ, ಮುಸ್ಲಿಮರ ಹೆಸರು ಹೇಳಿ ಕಣ್ಣೀರು ಹಾಕುತ್ತಾರೆ. ಸಂದರ್ಭ ಬಂದರೆ ಬಿಜೆಪಿಯೊಂದಿಗೆ ಸೇರಿ, ಬಾಬರಿ ಮಸೀದಿ ಧ್ವಂಸವನ್ನೂ ಸಮರ್ಥಿಸಿಕೊಳ್ಳುತ್ತಾರೆ. ತನ್ನ ಸಾಲ ತೀರಿಸುವುದಕ್ಕಾಗಿ ಬಿಜೆಪಿಯ ಬಾಗಿಲನ್ನು ಬಡಿಯುವ ಕೊನೆಯ ಹಂತಕ್ಕೆ ಬಂದು ನಿಂತಿದ್ದಾರೆ ಸಿ. ಎಂ. ಇಬ್ರಾಹೀಮ್.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮ್ ಸಮುದಾಯಕ್ಕೆ ಬಗೆಯುತ್ತಿರುವ ಅನ್ಯಾಯಗಳನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯವನ್ನು ಧಾರ್ಮಿಕ ನೆಲೆಯಲ್ಲಿ ನೋಡದೆ, ಶೋಷಿತ ಸಮುದಾಯವಾಗಿ ನೋಡುವುದನ್ನು ಕಾಂಗ್ರೆಸ್ ಮೊತ್ತ ಮೊದಲು ಕಲಿಯಬೇಕಾಗಿದೆ. ಸಾಚಾರ್ ಸಮಿತಿ ಮುಸ್ಲಿಮರನ್ನು ‘ನವ ದಲಿತರು’ ಎಂದು ಕರೆದಿದೆ. ಶಿಕ್ಷಣ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಮುಸ್ಲಿಮರು ಇನ್ನಷ್ಟು ಕೆಳಗೆ ತಳ್ಳಲ್ಪಡುತ್ತಿದ್ದಾರೆ. ಈ ಶೋಷಿತ ಸಮುದಾಯ ಅಭಿವೃದ್ಧಿಯಾಗದೆ ಭಾರತ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯ ಕಡೆಗೆ ಸಾಗುವುದಕ್ಕೆ ಸಾಧ್ಯವಿಲ್ಲ. ‘ಮುಸ್ಲಿಮರ ತುಷ್ಟೀಕರಣ’ ಎನ್ನುವ ಆರೆಸ್ಸೆಸ್‌ನ ಸುಳ್ಳನ್ನು ಸಾಚಾರ್ ಸಮಿತಿಯ ವರದಿ ಬಹಿರಂಗ ಪಡಿಸಿದ ಬಳಿಕವೂ, ಕಾಂಗ್ರೆಸ್ ಪಕ್ಷ, ಮುಸ್ಲಿಮ್ ಸಮುದಾಯದ ಕುರಿತಂತೆ ಕೀಳರಿಮೆಯಿಂದ ನರಳುತ್ತಿದೆ. ಅದಕ್ಕೆ ಮುಸ್ಲಿಮ್ ಸಮುದಾಯದ ಮತಗಳು ಬೇಕಾಗಿದೆ. ಅದರೆ ಅವರ ಅಭಿವೃದ್ಧಿ ಬೇಕಾಗಿಲ್ಲ ಅಥವಾ ಮುಸ್ಲಿಮರ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ಎಲ್ಲಿ ಕಾಂಗ್ರೆಸ್‌ನೊಳಗಿರುವ ಮೃದು ಹಿಂದುತ್ವವಾದಿಗಳು ತಿರುಗಿ ಬೀಳುತ್ತಾರೆಯೋ ಅಥವಾ ಆರೆಸ್ಸೆಸ್ ಅದನ್ನು ಕಾಂಗ್ರೆಸ್ ವಿರುದ್ಧ ಬಳಸಿಕೊಳ್ಳುತ್ತದೆಯೋ ಎಂಬ ಭಯ ಕಾಂಗ್ರೆಸ್‌ಗಿದೆ. ಇದು ಎಲ್ಲಿಗೆ ತಲುಪಿದೆಯೆಂದರೆ ‘ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಅವರು ಗೆಲ್ಲುವುದಿಲ್ಲ’ ಎನ್ನುವವರೆಗೆ. ಆದರೆ ವಿಪರ್ಯಾಸವೆಂದರೆ, ಇಂದು ಕಾಂಗ್ರೆಸ್ ಪಕ್ಷದಲ್ಲಿ ಯಾವ ಜಾತಿ, ಧರ್ಮದ ಜನರು ನಿಂತರೂ ಗೆಲ್ಲುವ ಸ್ಥಿತಿಯಲ್ಲ್ಲಿಲ್ಲ. ಆದರೆ ಕಾಂಗ್ರೆಸ್ ಪ್ರಕಾರ ಚುನಾವಣೆಯಲ್ಲಿ ‘ಮುಸ್ಲಿಮರಷ್ಟೇ ಸೋಲುವ ಅಭ್ಯರ್ಥಿ’ಗಳು. ಸರಿ. ಇಂತಹ ಸಂದರ್ಭದಲ್ಲಿ ಶೋಷಿತ, ದಮನಿತ ಸಮುದಾಯಕ್ಕೆ ಅವಕಾಶ ನೀಡುವುದಕ್ಕಾಗಿಯೇ ವಿಧಾನ ಪರಿಷತ್, ರಾಜ್ಯಸಭೆಗಳಿವೆ. ವಿಧಾನಸಭೆಯಲ್ಲಿ ಗೆಲ್ಲದೇ ಇದ್ದರೇನಾಯಿತು, ಕಾಂಗ್ರೆಸ್‌ಗೆ ನಿಜಕ್ಕೂ ಶೋಷಿತ ಸಮುದಾಯದೊಂದಿಗೆ ಕಾಳಜಿಯಿದ್ದರೆ ವಿಧಾನ ಪರಿಷತ್‌ನಲ್ಲಿ ಪ್ರಮುಖ ಸ್ಥಾನವನ್ನು ನೀಡಬಹುದು? ಅದನ್ನಾದರೂ ಎಷ್ಟರಮಟ್ಟಿಗೆ ನಿಭಾಯಿಸಿದೆ? ಈ ಬಾರಿ ಸಿ. ಎಂ. ಇಬ್ರಾಹೀಮ್ ಅವರ ಗದ್ದಲಕ್ಕೆ ಬೆದರಿ, ಯು.ಟಿ.ಖಾದರ್ ಅವರಿಗೆ ವಿಪಕ್ಷ ಉಪನಾಯಕ ಸ್ಥಾನವನ್ನು ನೀಡಿದೆ.

ಒಂದು ಕಾಲದಲ್ಲಿ ನಝೀರ್ ಸಾಬ್, ಅಝೀಝ್ ಸೇಠ್, ಬಿ. ಎ. ಮೊಹಿದೀನ್, ಜಾಫರ್ ಶರೀಫ್‌ರಂತಹ ಮುತ್ಸದ್ದಿ ನಾಯಕರು ಮುಸ್ಲಿಮ್ ಸಮುದಾಯದಲ್ಲಿದ್ದರು. ಇಂದು ಅಂತಹ ಮುತ್ಸದ್ದಿಗಳ ಕೊರತೆ ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲೂ ಎದ್ದು ಕಾಣುತ್ತಿದೆ. ಕಾರಣ ಸ್ಪಷ್ಟ. ಪ್ರತಿಭೆ, ತಿಳುವಳಿಕೆ, ಮುತ್ಸದ್ದಿತನ ಇರುವ ಮುಸ್ಲಿಮ್ ನಾಯಕರನ್ನು ಬೆಳೆಯುವ ಹಂತದಲ್ಲಿ ಚಿವುಟಿ ಅವರಿಗೆ ಪರ್ಯಾಯವಾಗಿ ಗುಲಾಮಿ ಮನಸ್ಥಿತಿಯ ನಾಯಕರನ್ನು ತಂದು ನಿಲ್ಲಿಸಲಾಗುತ್ತದೆ. ಸ್ವಂತಿಕೆ, ಪ್ರಬುದ್ಧತೆ ಇರುವ ನಾಯಕರನ್ನು ಬೆಳೆಯಗೊಡದ ಕಾರಣಕ್ಕಾಗಿಯೇ ಕಾಂಗ್ರೆಸ್‌ನಲ್ಲಿ ಅತ್ಯಂತ ಉನ್ನತ ಹುದ್ದೆಗಳಿಗೆ ಯೋಗ್ಯರಾಗಿರುವ ನಾಯಕರ ಕೊರತೆಗಳೂ ಎದ್ದು ಕಾಣುತ್ತಿವೆ. ಸಣ್ಣ ಸಣ್ಣ ಹುದ್ದೆಗಳಿಗೆ ತೃಪ್ತಿ ಪಟ್ಟು ಸಮುದಾಯದ ಹಿತಾಸಕ್ತಿ ಬಲಿಕೊಟ್ಟು, ಕಾಂಗ್ರೆಸ್ ಹಿತಾಸಕ್ತಿಗಾಗಿ ದುಡಿಯುವ ಮುಸ್ಲಿಮ್ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಒಂದು ಕಾಲದ ಮುತ್ಸದ್ದಿ ನಾಯಕರೆಂದು ಗುರುತಿಸಿಲ್ಪಟ್ಟರು ಮುದುಕರಾಗುತ್ತಿದ್ದ ಹಾಗೆಯೇ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ಕೊಡಿಸಲು ಶ್ರಮಿಸಿದರೇ ಹೊರತು, ಮುಸ್ಲಿಮರೊಳಗಿರುವ ಇತರ ಪ್ರತಿಭೆಗಳನ್ನು ಬೆಳೆಸಲು ಶ್ರಮಿಸಲಿಲ್ಲ. ಶೋಷಿತ ಸಮುದಾಯಗಳಿಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನೊಳಗಿರುವ ಹಿರಿಯ ಮುಸ್ಲಿಮ್ ನಾಯಕರು ಎಸಗಿದ ದ್ರೋಹದ ಫಲವಾಗಿಯೇ ಇಂದು ಈ ದೇಶ ಸಂಘಪರಿವಾರದ ಹಿಡಿತದಲ್ಲಿ ನರಳ ಬೇಕಾದ ಸ್ಥಿತಿಗೆ ಬಂದು ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X