ಮುಸಾಬಖ 2022: ಕಲ್ಲಡ್ಕ - ಕೆ.ಸಿ.ರೋಡ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ವಿಟ್ಲ, ಫೆ.2: ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಪುತ್ತೂರಿನ ಸಾಲ್ಮರ ಸೈಯದ್ ಮಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 'ಮುಸಾಬಖ-2022' ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಕಲ್ಲಡ್ಕ - ಕೆ.ಸಿ.ರೋಡ್ ನ ನೂರುಲ್ ಉಲೂಂ ಮದ್ರಸದ ಮೂವರು ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜೂನಿಯರ್ ವಿಭಾಗದ ಗ್ರೂಪ್ ಹಾಡಿನಲ್ಲಿ ಪ್ರಥಮ ಸ್ಥಾನ ಗಳಿಸದ ಮುಹಿಯುದ್ದೀನ್ ಮಿಸ್ತಹ್, ಮುಹಮ್ಮದ್ ಮುಝಮ್ಮಿಲ್, ಮುಹಮ್ಮದ್ ಫಾಯಿಝ್ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಎಂದು ಪ್ರಕಟನೆ ತಿಳಿಸಿದೆ.
Next Story