ಗುರುಪುರ ಬಡಕರೆ: ಕಾಂಕ್ರಿಟ್ ರಸ್ತೆ ಉದ್ಘಾಟನೆ

ಮಂಗಳೂರು, ಫೆ.2: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಬಡಕರೆ ಶ್ರೀ ಕೋರ್ದಬ್ಬು ದೈವಸ್ಥಾನದವರೆಗೆ ನಿರ್ಮಿಸಲಾದ ರಸ್ತೆ ಕಾಂಕ್ರಿಟ್ ರಸ್ತೆಯನ್ನು ಬುಧವಾರ ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಜಿ.ಎಂ. ಉದಯ ಭಟ್, ಸಚಿನ್ ಅಡಪ, ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ ಹಾಗೂ ಮುಖಂಡರಾದ ಪುರಂದರ ಮಲ್ಲಿ, ಶ್ರೀಕರ ಶೆಟ್ಟಿ, ವಿನಯ್ ಸುವರ್ಣ, ಜಯರಾಮ ಕೋಟ್ಯಾನ್, ಸೇಸಮ್ಮ, ಜಲಜಾ, ಸೋಮಯ್ಯ ಗುರುಪುರ, ಶೋಭಾ ಡಿ.ನಡುಗುಡ್ಡೆ, ಉದ್ಯಮಿ ಸುಧೀರ್ ಕಾಮತ್, ಸಾದಿಕ್ ಅಡ್ಡೂರು, ರಾಜೇಶ್ ಶೆಟ್ಟಿ, ಹೇಮಚಂದ್ರ, ಸತೀಶ್ ಕಾವ, ಜಿ.ಕೆ. ನರಸಿಂಹ ಪೂಜಾರಿ, ರೋಹಿತಾಶ್ವ ಭಂಡಾರಿ, ಗುರುಪುರ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story