ತಲಪಾಡಿ; ದನದ ಮಾಂಸ ಅಕ್ರಮ ಸಾಗಾಟ ಆರೋಪ: ನಾಲ್ವರ ಬಂಧನ

ಮಂಗಳೂರು, ಫೆ.3: ಕೇರಳದಿಂದ ಮಂಗಳೂರಿಗೆ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಉಳ್ಳಾಲ ಪೊಲೀಸರು ನಾಲ್ಕು ಮಂದಿಯನ್ನು ಗುರುವಾರ ತಲಪಾಡಿಯಲ್ಲಿ ಬಂಧಿಸಿದ್ದಾರೆ.
ಬಂಧಿತರನ್ನು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯ ಹುಸೈನ್, ಉಳ್ಳಾಲ ಕೋಡಿಯ ಮುಝಮ್ಮಿಲ್, ಅಮೀನ್, ಶುಹೈಬ್ ಅಕ್ತರ್ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ತಲಪಾಡಿ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಸಹಿತ ಮಾಂಸವನ್ನು ವಶಪಡಿಸಿದ್ದಾರೆ.
Next Story