ವೇಷಭೂಷಣಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧಕ್ಕೆಯಾಗದಿರಲಿ: ಎಸ್ಸೆಸ್ಸೆಫ್
ಉಡುಪಿ, ಫೆ.3: ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಉಡುಪಿಯ ಸರಕಾರಿ ಕಾಲೇಜಿನಲ್ಲಿ ತರಗತಿಗೆ ಪ್ರವೇಶ ನಿರಾಕರಿಸುವ ಮೂಲಕ ಶಿಕ್ಷಣ ಪಡೆಯುವ ಅವರ ಮೂಲಭೂತ ಅಧಿಕಾರವನ್ನು ಪ್ರಾಂಶುಪಾಲರು ಹಾಗೂ ಕಾಲೇಜು ಆಡಳಿತ ಮಂಡಳಿ ಕಸಿದುಕೊಂಡಿದೆ ಎಂದು ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಸಿಂಡಿಕೇಟ್ ತೀವ್ರವಾಗಿ ಖಂಡಿಸಿದೆ.
30 ದಿನಗಳಿಗೂ ಅಧಿಕ ದಿನ ಅವರನ್ನು ತರಗತಿಗೆ ಸೇರಿಸದೆ ಶಾಲಾ ವರಾಂಡ ದಲ್ಲೇ ಕೂರಿಸಿ ಅವಮಾನಿಸಿ ರುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ತಮಗಿಷ್ಠ ಬಂದ ವಸ್ತ್ರ ಧರಿಸುವುದು ಸಂವಿಧಾನ ನೀಡಿರುವ ವೈಯಕ್ತಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ಈ ಹಿಂದಿನಿಂದಲೂ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಶಿಕ್ಷಣ ಸಂಸ್ಥೆಗಳಿಗೆ ತೆರೆಳುತ್ತಿದ್ದಾರೆ. ಕುಂಕುಮ, ನಾಮ, ಹಣೆ ಬೊಟ್ಟು ಧಾರಣೆ ಹೇಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕೋ, ಹಿಜಾಬ್ ಧಾರಣೆ ಕೂಡ ಅವವರ ಹಕ್ಕು ಎಂದು ಅದು ತಿಳಿಸಿದೆ.
ಈ ವಿಚಾರವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಸಮಾನ ಅವಕಾಶ, ಸಮಾನ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮುಂತಾದ ಸಂವಿಧಾನಾತ್ಮಕ ಪ್ರಕ್ರಿಯೆಗಳ ಮೂಲಕ ಇದನ್ನು ಬಗೆಹರಿ ಸಬೇಕು ಎಂದು ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಎಂ.ಎ. ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.