ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯ
![ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯಯ](https://www.varthabharati.in/sites/default/files/images/articles/2022/02/3/323773-1643903505.jpg)
ಸಾಂದರ್ಭಿಕ ಚಿತ್ರ
ಉಡುಪಿ, ಫೆ.3: ದಕ್ಷಿಣ-ಪಶ್ಚಿಮ ರೈಲ್ವೆಯು ಶ್ರವಣಬೆಳಗೊಳ-ಹಾಸನ ಜಂಕ್ಷನ್ ವಿಭಾಗದಲ್ಲಿ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿರುವುದರಿಂದ ಫೆ.3ರಿಂದ ಮಾ.15ರವರೆಗೆ ಯಶವಂತಪುರ ಹಾಗೂ ಕಾರವಾರ ಎಕ್ಸ್ಪ್ರೆಸ್ ರೈಲಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.
ರೈಲು ನಂ.16515 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲಿನ ಫೆ.4, ಫೆ.7 ಹಾಗೂ ಫೆ.9ರ ಸಂಚಾರ ಚನ್ನರಾಯಪಟ್ಟಣ ರೈಲು ನಿಲ್ದಾಣದಲ್ಲಿ 35 ನಿಮಿಷ ತಡವಾಗಲಿದೆ. ಅದೇ ರೀತಿ ಫೆ.11, ಫೆ.14, ಫೆ.16 ಹಾಗೂ ಫೆ.18ರ ಇದೇ ರೈಲಿನ ಸಂಚಾರ ಶ್ರವಣಬೆಳಗೊಳ ನಿಲ್ದಾಣದಲ್ಲಿ 80 ನಿಮಿಷ ವಿಳಂಬಗೊಳ್ಳಲಿದೆ.
ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲಿನ ಫೆ.21, ಫೆ.23, ಫೆ.25, ಫೆ.28, ಮಾ.2 ಹಾಗೂ ಮಾ.4ರ ಸಂಚಾರ ಸಮುದ್ರವಲ್ಲಿ ನಿಲ್ದಾಣದಲ್ಲಿ 15 ನಿಮಿಷ ವಿಳಂಬಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದ್ದು, ಪ್ರಯಾಣಿಕರು ಸಹಕರಿಸುವಂತೆ ವಿನಂತಿಸಿದೆ.
Next Story