ಮೂಡುಶೆಡ್ಡೆ: ಉಚಿತ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ
ಮಂಗಳೂರು, ಫೆ.3 : ಗುರುಪುರ ಬಂಟರ ಮಾತೃ ಸಂಘ (ರಿ)ದ ಸಾಮಾಜಿಕ ಸೇವಾ ಯೋಜನೆಯಡಿ ಬಡತನ ದಲ್ಲಿರುವ ಮೂಡುಶೆಡ್ಡೆಯ ಸುಶೀಲಾ ಶೆಟ್ಟಿಗೆ ನಿರ್ಮಿಸಿಕೊಡಲಿರುವ ಉಚಿತ ಮನೆ ನಿರ್ಮಾಣಕ್ಕ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು ಮಾತನಾಡಿದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆ ಮಾತನಾಡಿ ಗುರುಪುರ ಬಂಟರ ಮಾತೃ ಸಂಘವು ‘ಫಲ್ಗುಣಿ ದತ್ತಿ ನಿಧಿ’ ರಚಿಸಿದ್ದು, ಈ ಮೂಲಕ ಇನ್ನಷ್ಟು ಸಾಮಾಜಿಕ ಕಳಕಳಿಯ ಕೆಲಸ ಮಾಡುವ ಉದ್ದೇಶ ಹೊಂದಿದೆ ಎಂದರು.
ಅಂತಾರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಯುವ ವಿಭಾಗದ ಉಪಾಧ್ಯಕ್ಷ ದೇವಿಚರಣ್ ಶೆಟ್ಟಿ, ಮೂಡುಶೆಡ್ಡೆ ಗ್ರಾಪಂ ಪಂಚಾಯತ್ ಉಪಾಧ್ಯಕ್ಷ ಅನಿಲ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಶೇಖರ, ಬಬಿತಾ ಮತ್ತು ಕಿರಣ್ ಶೆಟ್ಟಿ, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಮೇಶ್, ಸಂಘದ ಪದಾಧಿಕಾರಿಗಳಾದ ಸುದರ್ಶನ ಶೆಟ್ಟಿ ಪೆರ್ಮಂಕಿ, ಪುರುಷೋತ್ತಮ ಮಲ್ಲಿ, ಜಯರಾಮ ರೈ ಉಳಾಯಿಬೆಟ್ಟು, ಪ್ರವೀಣ್ ಆಳ್ವ ಕಡೆಗುಂಡ್ಯ, ಇಂದಿರಾಕ್ಷಿ, ಹರೀಶ್ ಶೆಟ್ಟಿ ಉಪ್ಪುಗೂಡು, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.